Tuesday, April 13, 2021

ಹೃದಯಾಘಾತದಿಂದ ರಾಜ್ಯದ ಮತ್ತೊಬ್ಬ ಯೋಧ ಸಾವು

ಮಂಗಳೂರು: ಕರ್ತವ್ಯದಲ್ಲಿದ್ದಾಗಲೇ ಕರ್ನಾಟಕದ ಮತ್ತೊಬ್ಬ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಉಪ್ಪಿನಂಗಡಿ ಸಮೀಪದ ಬಾರ್ಯ ಗ್ರಾಮದ ಅಲಿಂಗಿರ ಮನೆ ನಿವಾಸಿ ಸಂದೇಶ್ ಶೆಟ್ಟಿ(34) ಹೃದಯಾಘಾತದಿಂದ ಮೃತಪಟ್ಟವರು.
ರಜೆಯಲ್ಲಿ ಊರಿಗೆ ಬಂದವರು ಕಳೆದ ಸೋಮವಾರವಷ್ಟೇ ಮರಳಿ ಕರ್ತವ್ಯಕ್ಕೆ ಹಿಂತಿರುಗಿದ್ದರು. ಮಥುರಾದಲ್ಲಿನ ಕ್ವಾರೆಂಟೈನ್ ಕೇಂದ್ರದಲ್ಲಿ ಕರ್ತವ್ಯಕ್ಕೆ ಸಂದೇಶ್ ನಿಯೋಜನೆಗೊಂಡಿದ್ದು, ಅಲ್ಲಿಯೇ ಹೃದಯಾಘಾತಕ್ಕೀಡಾಗಿರುವುದಾಗಿ ತಿಳಿದುಬಂದಿದೆ. ಇವರು ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಸಿಆರ್‌ಪಿಎಫ್‌ ಯೋಧ ಹಾಸನ ತಾಲೂಕಿನ ಈಚಲಹಳ್ಳಿ ಗ್ರಾಮದ ಹೇಮಂತ್‌ಕುಮಾರ್ (42) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರು ಛತ್ತಿಸಗಡದ ಸುಕ್ಮಾದಲ್ಲಿ 150ನೇ ಸಿಆರ್‌ಪಿಎಫ್‌ ಬೆಟಾಲಿಯನ್‌ ಯೋಧರಾಗಿದ್ದರು.

http://134.209.153.225/hassan-native-warrior-death-from-heart-attack-in-chattisghar/

ಮತ್ತಷ್ಟು ಸುದ್ದಿಗಳು

Latest News

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೋಂ ಕ್ವಾರಂಟೈನ್

newsics.com ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೊಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಮುಖ್ಯಮಂತ್ರಿ ಕಚೇರಿಯ ಕೆಲವು ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಮುಂಜಾಗ್ರತಾ...

ಬೆಂಗಳೂರಿನಲ್ಲಿ 5500 ಕೊರೋನಾ ಸೋಂಕು, ರಾಜ್ಯದಲ್ಲಿ 8778 ಪ್ರಕರಣ, 67 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಯುಗಾದಿ ದಿನದಂದು ಕೂಡ ಕೊರೋನಾ ಅಬ್ಬರ ಮುಂದುವರಿದಿದೆ. ರಾಜ್ಯದಲ್ಲಿ ಹೊಸದಾಗಿ 8778 ಮಂದಿಗೆ ಕೊರೋನಾ ಸೋಂಕು ತಗುಲಿದೆ.  ಬೆಂಗಳೂರಿನಲ್ಲಿ ಹೊಸದಾಗಿ 5500 ಕೊರೋನಾ ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ ಕೊರೋನಾ ಒಂದೇ ದಿನ...

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ ನಿವಾಸಿ 58 ಡಯಾಲಿಸಿಸ್'ಗೆ ಬಂದಿದ್ದ ಮಹಿಳೆಗೆ...
- Advertisement -
error: Content is protected !!