newsics.com
ಬೆಂಗಳೂರು: ಚಂದನವನದಲ್ಲಿ ಮಾದಕ ದ್ರವ್ಯ ಜಾಲದ ನಂಟು ಪ್ರಕರಣ ಸಂಬಂಧ 2ನೇ ಬಾರಿಗೆ ಸಿಸಿಬಿ ಮುಂದೆ ಹಾಜರಾಗಿದ್ದ ನಟ ದಿಗಂತ್ ವಿಚಾರಣೆ ಅಂತ್ಯಗೊಂದಿದೆ.
ನೋಟೀಸ್ ಹಿನ್ನೆಲೆಯಲ್ಲಿ 2ನೇ ಬಾರಿ ಬೆಂಗಳೂರಿನ ಚಾಮರಾಜಪೇಟೆ ಸಿಸಿಬಿ ಕಚೇರಿಗೆ ದಿಗಂತ್ ಹಾಜರಾಗಿದ್ದು, ಸತತ 3 ಗಂಟೆಗಳ ವಿಚಾರಣೆ ಬಳಿಕ ಹೊರಬಂದಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ದಿಗಂತ್, ಇಂದಿನ ವಿಚಾರಣೆ ಮುಗಿದಿದೆ. ಮತ್ತೆ ಕರೆದರೆ ಬರುತ್ತೇನೆ. ಸಿಸಿಬಿ ಅಧಿಕಾರಿಗಳ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಡ್ರಗ್ಸ್ ಪ್ರಕರಣ ಸಂಬಂಧ ನಟ ದಿಗಂತ್ ಹಾಗೂ ಐಂದ್ರಿತಾ ಸೆ.16ರಂದು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು. ಇಂದು ನಟ ದಿಗಂತ್ ಅವರನ್ನು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು. ನಟ ದಿಗಂತ್ ಅವರನ್ನು ಎರಡನೇ ಬಾರಿ ವಿಚಾರಣೆಗೆ ಸಿಸಿಬಿ ಕರೆದಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಅವರನ್ನು ಸಿಸಿಬಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿತ್ತು.
ದಿಗಂತ್ ವಿಚಾರಣೆ ಅಂತ್ಯ, ಮತ್ತೆ ಕರೆದರೆ ಬರುವೆ
Follow Us