newsics.com
ಮಂಗಳೂರು : ಮಂಗಳೂರಿನ ಹೊರವಲಯದಲ್ಲಿರುವ ಮಳಲಿ ಮಸೀದಿಯಲ್ಲಿ ಹಿಂದೂ ದೇವಾಲಯ ಶೈಲಿಯಲ್ಲಿ ಕಟ್ಟಡ ಪತ್ತೆಯಾಗಿತ್ತು ಎಂಬ ವಿವಾದದ ಸಂಬಂಧ ನಡೆಸಲಾದ ತಾಂಬೂಲ ಪ್ರಶ್ನೆಯಲ್ಲಿ ಈ ಸ್ಥಳದಲ್ಲಿ ಹಿಂದೂ ಧಾರ್ಮಿಕ ಸ್ಥಳವಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ಶ್ರೀ ರಾಮಾಂಜನೇಯ ದೇಗುಲದಲ್ಲಿ ತಾಂಬೂಲ ಪ್ರಶ್ನೆ ನಡೆಸಿದ ಕೇರಳದ ಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್, ಪೂರ್ವದಲ್ಲಿ ಇಲ್ಲೊಂದು ಗುರುಮಠವಿತ್ತು. ಮಳಲಿ ಮಸೀದಿ ಹಿಂದೆ ಒಂದು ಕಾಲದಲ್ಲಿ ಹಿಂದೂ ಧಾರ್ಮಿಕ ಸ್ಥಳವಾಗಿತ್ತು. ಆದರೆ ಯಾವದೋ ಒಂದು ವಿವಾದದಿಂದ ಇಲ್ಲಿದ್ದ ದೇಗುಲ ನಾಶವಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಹಿಂದೂಪರ ಸಂಘಟನೆಗಳ ವಾದಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ.
ವಿದ್ಯಾರ್ಥಿಯಿಂದ ಗುಂಡಿನ ದಾಳಿ: 18 ಶಾಲಾ ಮಕ್ಕಳು, ಓರ್ವ ಶಿಕ್ಷಕ ಸೇರಿ 21 ಮಂದಿ ಸಾವು, ಬಂದೂಕುಧಾರಿಯ ಹತ್ಯೆ