ಮಾರ್ಕೋನಹಳ್ಳಿ ಜಲಾಶಯ ಬಳಿ ಆಟವಾಡುತ್ತಿದ್ದ ನಾಲ್ವರು ನೀರುಪಾಲು

newsics.com ತುಮಕೂರು: ಕುಣಿಗಲ್ ತಾಲೂಕಿನ ಗಡಿಭಾಗದಲ್ಲಿನ ಮಾರ್ಕೋನಹಳ್ಳಿ ಜಲಾಶಯದ ಕೋಡಿ ನೀರಿನಲ್ಲಿ ಆಟವಾಡಲು ಹೋದ ನಾಲ್ವರು ಕೊಚ್ಚಿಹೋಗಿದ್ದಾರೆ. ಪರ್ವಿನ್‍ತಾಜ್ (23) ಮತ್ತು ಸಾದೀಯ(17) ರಾಜು(23) ಮತ್ತು ಅಪ್ಪು(20) ನೀರಿನಲ್ಲಿ ಕೊಚ್ಚಿಹೋಗಿರುವ ಮೃತರು. ಭಾನುವಾರ ರಜೆ ಇದ್ದ ಹಿನ್ನೆಲೆಯಲ್ಲಿ ಜಲಾಶಯದ ಬಲಭಾಗದ ಕೋಡಿ ಹಳ್ಳದಲ್ಲಿ ಆಟವಾಡುತ್ತಿದ್ದರು. ಆಟವಾಡುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಧಿಡೀರನೇ ಮಾರ್ಕೋನಹಳ್ಳಿ ಜಲಾಶಯಕ್ಕೆ ಎರಡು ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಾಗಿ, ಕೊಚ್ಚಿ ಹೋಗಿದ್ದಾರೆ. ಸ್ಥಳದಲ್ಲಿದ್ದವರು ಅವರನ್ನು ರಕ್ಷಿಸಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ಕುಟುಂಬದ ಸದಸ್ಯರು ಕಣ್ಣ … Continue reading ಮಾರ್ಕೋನಹಳ್ಳಿ ಜಲಾಶಯ ಬಳಿ ಆಟವಾಡುತ್ತಿದ್ದ ನಾಲ್ವರು ನೀರುಪಾಲು