newsics.com
ಗದಗ: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ವ್ಯಪ್ತಿಯಲ್ಲಿನ ಆಂಜನೇಯ ಮೂರ್ತಿಯನ್ನು ಕಿಡಿಗೇಡಿಗಳು ಶನಿವಾರ ಬೆಳಗಿನ ಜಾವ ಕಳ್ಳತನ ಮಾಡಿದ್ದಾರೆ.
ಶ್ರಾವಣ ಶನಿವಾರದ ಬೆಳಗಿನ ಪೂಜೆಗೆಂದು ಅರ್ಚಕರು ಹನುಮನ ಕಟ್ಟೆಗೆ ತೆರಳಿದ್ದ ಸಮಯ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಮಾರುತಿ ದೇವಸ್ಥಾನದ ಕಮಿಟಿ ಸದಸ್ಯರು ಸೇರಿ ಸಭೆ ಮಾಡಿದ್ದು, ಸಂಜೆಯೊಳಗೆ ಮೂರ್ತಿಯನ್ನು ವಾಪಸ್ ತಂದಿಡದಿದ್ದರೆ ಪೊಲೀಸ್ಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.