newsics.com
ಚಿಕ್ಕಮಗಳೂರು: ಮಗನ ಪಬ್ ಜಿ ಆಟಕ್ಕೆ, ತಾಯಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ ಗಿರಿಶ್ರೇಣಿಯ ಅಗಲಖಾನ್ ಎಸ್ಟೇಟ್ ನಲ್ಲಿ ನಡೆದಿದೆ.
ಇಮ್ತಿಯಾಜ್ ಮತ್ತು ಮೈಮುನ್ನಾ ದಂಪತಿ ಕುಟುಂಬ ಎರಡು ವರ್ಷದಿಂದ ಎಸ್ಟೇಟ್ ನ ಕೂಲಿ ಲೈನ್ ನಲ್ಲಿ ವಾಸವಾಗಿದ್ದರು.ಇಮ್ತಿಯಾಜ್ ಮನೆಯಲ್ಲಿ ಗಲಾಟೆ ನಡೆದಿದ್ದು, ಯಾವಾಗಲೂ ಪಬ್ ಜಿ ಆಟದಲ್ಲಿ ತೊಡಗಿರುತ್ತೀಯಾ ಎಂದು ಪುತ್ರನಿಗೆ ಕೋವಿ ಹಿಡಿದು ಜೋರು ಮಾಡುತ್ತಿರುವ ವೇಳೆ ಮೈಮುನ್ನಾ ಮಧ್ಯೇ ಪ್ರವೇಶಿಸಿದ್ದಾರೆ. ಪುತ್ರನ ಪರ ಮಾತಾಡುತ್ತೀಯ ಎಂದು ಪತ್ನಿಗೆ ಗುಂಡು ಹಾರಿಸಿದ್ದಾರೆ.
ಗುಂಡಿನ ದಾಳಿಗೆ ಸ್ವಲ್ಪ ದೂರದಲ್ಲಿ ಬಿದ್ದ ಮೈಮುನ್ನಾ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಆದರೆ ಆಕೆ ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಆರೋಪಿಗಳಾದ ಇಮ್ತಿಯಾಜ್ ಮತ್ತು ತೌಫಿಕ್ ಅವರನ್ನು ಪೋಲಿಸರು ಬಂಧಿಸಿದ್ದಾರೆ.