newsics.com
ಯಾವುದೇ ಆಧಾರವಿಲ್ಲದೇ ಆಣೆಕಟ್ಟಿನ ಗೋಡೆಯನ್ನು ಹತ್ತಲು ಹೋದ ವ್ಯಕ್ತಿಯು ಆಯತಪ್ಪಿ ಬಿದ್ದು ಗಾಯಗೊಂಡ ಘಟನೆಯು ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಆಣೆಕಟ್ಟಿನಲ್ಲಿ ನಡೆದಿದೆ.
ಆಣೆಕಟ್ಟಿನಲ್ಲಿ ನೆರೆದಿದ್ದ ಪ್ರವಾಸಿಗರ ಎದುರು ಹುಚ್ಚು ಸಾಹಸ ಪ್ರದರ್ಶಿಸಲು ಮುಂದಾದ ವ್ಯಕ್ತಿಯು ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಅನೇಕರ ಮೊಬೈಲ್ ಕ್ಯಾಮರಾದಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗಾಯಗೊಂಡ ವ್ಯಕ್ತಿ ಗೌರಿಬಿದನೂರಿನವರಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.