newsics.com
ಹುಬ್ಬಳ್ಳಿ: ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಬೆಳಗ್ಗೆ ಸರಕು ತುಂಬಿದ್ದ ಲಾರಿ ಪಲ್ಟಿಯಾಗಿದೆ.
10 ಗಾಲಿಗಳ ಲಾರಿ ಇದಾಗಿದ್ದು, ಮಿತಿಮೀರಿ ಸರಕು ತುಂಬಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕ್ರೇನ್ಗಳ ಸಹಾಯದಿಂದ ಲಾರಿ ತೆರವು ಮಾಡುವ ಕಾರ್ಯ ಸಾಗಿದೆ.
ಚಾಲಕ ಸಾಹುಲ್ ಖಾನ್ ಮತ್ತು ಕ್ಲೀನರ್ ಮೊಹಮ್ಮದ್ ಸಾಹೀಫ್ ಲಾರಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಹರಿಯಾಣದಿಂದ ಬೆಳ್ಳುಳ್ಳಿ ಮತ್ತು ಪೇಸ್ಟ್ ಹೊತ್ತು ತಂದಿದ್ದ ಲಾರಿ ಇಲ್ಲಿಗೆ ಸಮೀಪದ ತಾರಿಹಾಳ ಕೈಗಾರಿಕಾ ಪ್ರದೇಶಕ್ಕೆ ಹೊರಟಿತ್ತು. ರಸ್ತೆ ಮಧ್ಯೆದಲ್ಲಿಯೇ ವಾಹನ ಪಲ್ಟಿಯಾಗಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.
ಒನ್ ವೇನಲ್ಲಿ ಲಾರಿ ಸಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪೂರ್ವ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಳವೆ ಬಾವಿಗೆ ಬಿದ್ದ ಮಗು: ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಕಾಶ್ಮೀರದಲ್ಲಿ ಭದ್ರತಾಪಡೆ ಕಾರ್ಯಾಚರಣೆ: ಪಾಂಪೋರ್ ನಲ್ಲಿ ಉಗ್ರನ ಹತ್ಯೆ
ಒಂದೇ ದಿನ 47, 638 ಮಂದಿಗೆ ಕೊರೋನಾ ಸೋಂಕು, 670 ಬಲಿ
ವಾಟ್ಸ್ಯಾಪ್ ಹೊಸ ಫೀಚರ್: ಏಳು ದಿನದಲ್ಲಿ ಮೆಸೇಜ್ ಮಾಯ
ಸಮುದ್ರ ತೀರದಲ್ಲಿ ವಿಹರಿಸುತ್ತಿರುವ ಪೋಟೋ ಶೇರ್ ಮಾಡಿದ ಪೂಜಾ ಹೆಗ್ಡೆ