ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇದ್ದಕ್ಕಿದ್ದ ಹಾಗೆ ಪಾಕಿಸ್ತಾನ ಪದ ಪ್ರಯೋಗ ಪ್ರತಿಧ್ವನಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಮತ್ತು ಬಿಜೆಪಿ ನಾಯಕರ ಮಧ್ಯೆ ಮಾತಿನ ಸಮರ ಆರಂಭವಾಗಿದೆ.ಇದು ಹೊಸತಲ್ಲ. ಆದರೆ ಮಾತಿನ ಮಧ್ಯೆ ಪಾಕಿಸ್ತಾನ ಪದ ಪ್ರಯೋಗ ನುಸುಳಿಕೊಂಡಿದೆ. ಶಿಕ್ಷಣ ಸಚಿವ ,ಸುರೇಶ್ ಕುಮಾರ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ. ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ,ಸುರೇಶ್ ಕುಮಾರ್ ಕುರಿತ ಗೌರವದ ಭಾವನೆಗೆ ಚ್ಯುತಿ ಉಂಟಾಗಿದೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನ ಇಲ್ಲದಿದ್ದರೆ ಬಿಜೆಪಿಗೆ ಒಂದು ಮತ ಕೂಡ ದೊರೆಯುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ. ನೆಹರೂ ಅವರ ಅಧಿಕಾರ ದಾಹ ಮತ್ತು ತುಷ್ಟೀಕರಣ ನೀತಿಯಿಂದ ಪಾಕಿಸ್ತಾನ ಜನ್ಮ ತಳೆದಿದೆ ಎಂದು ಟೀಕಿಸಿದ್ದಾರೆ. ಹೀಗೆ ರಾಷ್ಟ್ಕ ರಾಜಕಾರಣದಲ್ಲಿ ಸದ್ದು ಮಾಡುತ್ತಿದ್ದ ಪಾಕಿಸ್ತಾನ ಪದ ಬಳಕೆ ರಾಜ್ಯ ರಾಜಕಾರಣಕ್ಕೂ ಕಾಲಿಟ್ಟಿರುವುದು ಮುಂದಿನ ದಿನಗಳಲ್ಲಿ ಇನ್ನಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ