newsics.com
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಗು ನೋಡಿಕೊಳ್ಳುತ್ತಿದ್ದ ಮಹಿಳೆಯೊಬ್ಬಳು ನಾಲ್ಕು ವರ್ಷದ ಮಗುವಿಗೆ ಮತ್ತಿನ ಮದ್ದು ನೀಡಿ ಚಿನ್ನಾಭರಣಗಳ ಸಹಿತ ಪರಾರಿಯಾಗಿದ್ದಾಳೆ.
ಉದ್ಯಮಿಯೊಬ್ಬರ ಮನೆಯಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲ ತಾಣದ ಮೂಲಕ ಉದ್ಯಮಿಗೆ ಮಹಿಳೆಯ ಪರಿಚಯವಾಗಿತ್ತು. ನನ್ನ ಗಂಡ ನನ್ನನ್ನು ಬಿಟ್ಟು ಹೋಗಿದ್ದಾನೆ. ನನಗೆ ಯಾರು ಕೂಡ ಇಲ್ಲ. ತಕ್ಷಣ ಕೆಲಸದ ಅಗತ್ಯ ಇದೆ ಎಂದು 40 ವರ್ಷ ಪ್ರಾಯದ ಮಹಿಳೆಯೊಬ್ಬರು ಅವರ ಬಳಿ ಹೇಳಿದ್ದರಂತೆ.
ಈ ಮನವಿಗೆ ಸ್ಪಂದಿಸಿದ ಅವರು ಮನೆಯಲ್ಲಿ ಇದ್ದುಕೊಂಡು ಮಗುವಿನ ಆರೈಕೆ ಮಾಡುವಂತೆ ಸೂಚಿಸಿದ್ದರಂತೆ. ಹೀಗೆ ಮನೆಯಲ್ಲಿ ಇದ್ದ ಮಹಿಳೆ ಮಗುವಿಗೆ ಜ್ವರದ ಮದ್ದು ಹೆಚ್ಚಿನ ಪ್ರಮಾಣದಲ್ಲಿ ನೀಡಿ ಹಣ ಮತ್ತು ಚಿನ್ನಾಭರಣ ಜತೆ ಪರಾರಿಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
3000 ರೂಪಾಯಿ ಮತ್ತು ಚಿನ್ನಾಭರಣ ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ.