newsics.com
ಹುಬ್ಬಳ್ಳಿ: ಭಾರತೀಯ ರೈಲ್ವೆ ಇದೇ ಮೊದಲ ಬಾರಿಗೆ ಹವಾನಿಯಂತ್ರಿತ ಬೋಗಿಗಳಲ್ಲಿ ಚಾಕೊಲೇಟ್ಸ್ ಮತ್ತು ಆಹಾರ ಪದಾರ್ಥಗಳನ್ನು ಸಾಗಿಸಿದೆ.
ನೈಋತ್ಯ ರೈಲ್ವೆ ವಿಭಾಗ ಈ ಮಾಹಿತಿ ನೀಡಿದೆ. ಅ.8ರಂದು ಗೋವಾದ ವಾಸ್ಕೋ ಡ ಗಾಮಾ ರೈಲ್ವೆ ನಿಲ್ದಾಣದಿಂದ ದೆಹಲಿಯ ಓಖ್ಲಾ ರೈಲ್ವೆ ನಿಲ್ದಾಣದವರೆಗೆ 18 ಹವಾನಿಯಂತ್ರಿತ ಕೋಚ್ಗಳಲ್ಲಿ ಸುಮಾರು 163 ಟನ್ ತೂಕದ ಚಾಕೊಲೇಟ್ಗಳು ಮತ್ತು ನೂಡಲ್ಸ್ ಪೊಟ್ಟಣಗಳನ್ನು ಸಾಗಿಸಿರುವುದಾಗಿ ತಿಳಿಸಿದೆ.
ಎವಿಜಿ ಲಾಜಿಸ್ಟಿಕ್ಸ್ಗೆ ಸೇರಿದ ಸರಕು ಇದಾಗಿದ್ದು, ರೈಲ್ವೆಗೆ 12.83 ಲಕ್ಷ ಆದಾಯ ತಂದುಕೊಟ್ಟಿದೆ. ಹುಬ್ಬಳ್ಳಿ ವಿಭಾಗದ ವ್ಯಾಪಾರ ಅಭಿವೃದ್ಧಿ ಘಟಕದ ಹೊಸ ಮಾರ್ಕೆಟಿಂಗ್ ಪ್ರಯತ್ನ ಮಾಡಿದೆ ಎಂದು ಭಾರತೀಯ ರೈಲ್ವೆ ಟ್ವೀಟ್ ಮಾಡಿದೆ.
ಸರಕು ಸಾಗಣೆ ಮಾಡುವುದರಿಂದ ಹುಬ್ಬಳ್ಳಿ ವಿಭಾಗದಲ್ಲಿ ಅಕ್ಟೋಬರ್ 2020ರಿಂದ 1 ಕೋಟಿ ರೂಪಾಯಿ ಗಳಿಸಲಾಗಿದೆ. ಸೆಪ್ಟೆಂಬರ್ 2021ರಲ್ಲಿ ಇದೇ ವಿಭಾಗದಲ್ಲಿ 1.58 ಕೋಟಿ ರೂಪಾಯಿ ಗಳಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2021ರ ಸೆಪ್ಟೆಂಬರ್ವರೆಗೆ ಸರಕು ಸಾಗಣೆಯಿಂದಾಗಿ 11.17 ಕೋಟಿ ರೂ.ಗಳನ್ನು ಗಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಅತ್ಯಾಚಾರಿ ಆರೋಪಿ ಎಸ್ ಐ ಯಿಂದ ಲಂಚ ಸ್ವೀಕಾರ: ಮಹಿಳಾ ಸಬ್ ಇನ್ಸ್ ಪೆಕ್ಟರ್ ಬಂಧನ