Tuesday, January 19, 2021

ಇದು ಅಂಬಿ ದೇಗುಲ; ಅಭಿಮಾನಿಗಳ ಆದರ

newsics.com
ಮಂಡ್ಯ: ರೆಬೆಲ್ ಸ್ಟಾರ್, ಸ್ನೇಹಜೀವಿ ಅಂಬರೀಷ್ ಅವರಿಗೆ ದೇಗುಲ ನಿರ್ಮಿಸಿ ಈ ಊರಿನ ಜನ ಭಾರೀ ಅಭಿಮಾನ ಮೆರೆದಿದ್ದಾರೆ. ಮಂಡ್ಯ ಅದರಲ್ಲೂ ಈ ಊರಿನ ಜನರಿಗೆ ಅಂಬರೀಷ್ ಅಂದರೆ ಪಂಚಪ್ರಾಣ. ಈ ನೆನಪಿನಲ್ಲೇ ತಮ್ಮ ಪ್ರೀತಿಯ ನಟನಿಗಾಗಿ ದೇವಾಲಯ ನಿರ್ಮಿಸಿ ಪ್ರೀತಿ ತೋರಿದ್ದಾರೆ.
ಹೌದು, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ಅಂಬರೀಷ್ ಅವರ ಕಂಚಿನ ಪುತ್ಥಳಿ ನಿರ್ಮಿಸಿ, ದೇಗುಲವನ್ನೂ ಕಟ್ಟಿ ಅಭಿಮಾನ ತೋರಿದ್ದಾರೆ. ಎಂಟು ಲಕ್ಷ ರೂ. ವೆಚ್ಚದಲ್ಲಿ ಈ ದೇಗುಲ ನಿರ್ಮಿಸಲಾಗಿದೆ.
ಅಂಬರೀಷ್ ಅವರ ಎರಡನೇ ಪುಣ್ಯಸ್ಮರಣೆ ದಿನವಾದ ಇಂದು (ನ.24) ದೇಗುಲವನ್ನು ಅನಾವರಣಗೊಳಿಸಲಾಯಿತು. ಅಂಬರೀಷ್ ಪತ್ನಿ ಸಂಸದೆ ಸುಮಲತಾ ಅಂಬರೀಷ್, ಅಂಬರೀಷ್ ಪುತ್ರ ಅಭಿಷೇಕ್, ಖ್ಯಾತ ನಟ ದರ್ಶನ್ ಮೊದಲಾದವರು ದೇಗುಲ ಉದ್ಘಾಟಿಸಿದರು. ನಿಮ್ಮ ಪ್ರೀತಿಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ. ಮಾತೇ ಬರುತ್ತಿಲ್ಲ. ನಿಮ್ಮ ಅಭಿಮಾನಕ್ಕೆ ಆಭಾರಿ ಎಂದು ಸುಮಲತಾ ಈ ವೇಳೆ ಹೇಳಿದರು. ನಟ ದರ್ಶನ್ ಸಿನಿಮಾ ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಿದರು. ಇದಕ್ಕೂ ಮೊದಲು ಗ್ರಾಮಕ್ಕೆ ಆರಂಭಿಸಿದ ಸುಮಲತಾ, ದರ್ಶನ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.

ಫೆ.26ರಿಂದ ಮೂರು ದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನ

ಚಳಿಗಾಲ ಬಂದರೆ ಗುಲಾಬಿ ಬಣ್ಣದಿಂದ ಕಂಗೊಳಿಸುವ ಗ್ರಾಮ

ಗ್ರಾಮ ಪಂಚಾಯಿತಿ ಚುನಾವಣೆ: ಅಭ್ಯರ್ಥಿಗಳ ಅರ್ಹತೆ ಬಗ್ಗೆ ಸ್ಪಷ್ಟನೆ ನೀಡಿದ ಚುನಾವಣಾ ಆಯೋಗ

ಮತ್ತಷ್ಟು ಸುದ್ದಿಗಳು

Latest News

ಕಬ್ಬನ್’ಪಾರ್ಕ್’ನಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ ಕಾರ್ಯ ಆರಂಭ

newsics.com ಬೆಂಗಳೂರು: ಸುಮಾರು ಒಂದು ವರ್ಷದ ನಂತರ ಕಬ್ಬನ್ ಪಾರ್ಕ್‌ನಲ್ಲಿ ಸ್ಮಾರ್ಟ್ ಸಿಟಿ ಕೆಲಸ ಭಾನುವಾರ (ಜ.17) ಪ್ರಾರಂಭವಾಗಿದೆ. ಸದ್ಯ ಉದ್ಯಾನವನದ ಮೂಲಕ 4 ಕಿ.ಮೀ ನಡಿಗೆ...

ಮಾರ್ಚ್‌ ಮೊದಲ ವಾರ ಬಜೆಟ್- ಸಿಎಂ

newsics.com ಕುಂದಾಪುರ(ಉಡುಪಿ): ಮಾರ್ಚ್‌ ಮೊದಲ ವಾರ ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.ಕುಂಭಾಶಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಮಂಗಳವಾರ ಗಣಹೋಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಡುಪಿಯ ಧಾರ್ಮಿಕ ಪ್ರವಾಸದಲ್ಲಿ ಸಕಾಲಕ್ಕೆ...

ಸಸ್ಯಾಹಾರಿಗಳಿಗೆ ಕೊರೋನಾ ಸೋಂಕಿನ ಅಪಾಯ ಕಡಿಮೆ-ವರದಿ

newsics.com ನವದೆಹಲಿ: ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ತನ್ನ ಸುಮಾರು 40 ಸಂಸ್ಥೆಗಳಲ್ಲಿ ನಡೆಸಿದ ಹೊಸ ಸಮೀಕ್ಷೆಯಲ್ಲಿ, ಧೂಮಪಾನಿಗಳು ಮತ್ತು ಸಸ್ಯಾಹಾರಿಗಳಲ್ಲಿ ಕಡಿಮೆ ಸಿರೊಪೊಸಿಟಿವಿಟಿ ಹೊಂದಿರುವುದು ಕಂಡುಬಂದಿದ್ದು, ಅವರು ಕೊರೋನಾವೈರಸ್...
- Advertisement -
error: Content is protected !!