ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ( ಸಿಎಎ) ಬೆಂಬಲಿಸಿ ಸಾವಿರಾರು ಜನರು ಏಕಕಾಲದಲ್ಲಿ ಮಿಸ್ಡ್ ಕಾಲ್ ನೀಡಿ ಬೆಂಬಲ ಸೂಚಿಸಿದ್ದಾರೆ!
ಇದು ನಡೆದದ್ದು ಸಿಎಎ ಕುರಿತು ಜನಜಾಗೃತಿ ಮೂಡಿಸಲು ಹುಬ್ಬಳ್ಳಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ.
ಭಾಷಣದ ಮಧ್ಯದಲ್ಲಿ ಅಮಿತ್ ಶಾ, ನೆರೆದಿದ್ದ ಸುಮಾರು ಹತ್ತಾರು ಸಾವಿರ
ಜನರಿಗೆ ಏಕಕಾಲದಲ್ಲಿ ಮೊಬೈಲ್ ಕೈಗೆತ್ತಿಕೊಂಡು ಸಿಎಎ ಬೆಂಬಲಿಸಿ ಮಿಸ್ಡ್ ಕಾಲ್ ನೀಡುವಂತೆ
ಸೂಚಿಸಿದರು.
ಇದರಿಂದ ಪ್ರೇರೇಪಿತರಾದ ಸಾವಿರಾರು ಜನ ಈ ಸಂಖ್ಯೆಗೆ ಕರೆ ಮಾಡಿದರು.