NEWSICS.COM
ಕೊಡಗು:ಮಕ್ಕಳ ದಿನಾಚರಣೆಯಂದೇ ಮೂವರು ಮಕ್ಕಳ ಮೃತದೇಹ ಹಾರಂಗಿ ಎಡದಂಡೆ ಬಳಿ ದೊರೆತಿದೆ.
ಕುಶಾಲನಗರ ಸಮೀಪದ ತೊರೆನೂರು ಬಳಿಯ ಹಾರಂಗಿ ಎಡದಂಡೆ ನಾಲೆಯಲ್ಲಿ ತೇಲಿಬರುತ್ತಿದ್ದ ಮೂರು ಶವಗಳನ್ನು ಸ್ಥಳೀಯರು ಮೇಲಿತ್ತಿದ್ದಾರೆ. ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬರು ಮೂವರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದ್ದು, ತಾಯಿ ಚೆನ್ನಮ್ಮಳ (28) ಮೃತದೇಹ ಪತ್ತೆಯಾಗಿಲ್ಲ. ಜಲಾಶಯಕ್ಕೆ ನೀರಿನ ಹರಿವನ್ನು ಸ್ಥಗಿತಗೊಳಿಸಿ ಶೋಧ ನಡೆಸಲಾಗುತ್ತಿದೆ.
ವಿನಯ್, ವಿಜಯ್ ಹಾಗೂ ದೀಕ್ಷಾ ಎಂಬ ಇಬ್ಬರು ಗಂಡುಮಕ್ಕಳು, ಒಂದು ಹೆಣ್ಣು ಮಗುವಿನ ಮೃತದೇಹವನ್ನು ಸ್ಥಳೀಯರು ನಾಲೆಯಿಂದ ಹೊರತೆಗೆದಿದ್ದಾರೆ. ಈ ಸಂಬಂಧ ಕೊಣ್ಣನೂರು ಹಾಗೂ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ ನಂದಿಸುವ ವೇಳೆ ಕಟ್ಟಡ ಕುಸಿತ : ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಾವು