newsics.com
ಕಲಬುರಗಿ: ಟೈರ್ ಬ್ಲಾಸ್ಟ್ ಆಗಿ ಕಾರೊಂದು ಪಲ್ಟಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಜಿಲ್ಲೆಯ ಜೇವರ್ಗಿ ತಾಲೂಕಿನ ಮುದಬಾಳ ಕೆ ಕ್ರಾಸ್ ಬಳಿ ಈ ದುರಂತ ನಡೆದಿದೆ. ಯಾದಗಿರಿ ಜಿಲ್ಲೆ ಸುರಪುರ ಪಟ್ಟಣದ ನಿವಾಸಿಗಳಾದ ಅನಿತಾ, ಆಕೆಯ ಪುತ್ರ ಹೇಮಂತ್ ಹಾಗೂ ಚಾಲಕ ರಾಮು ಮೃತರು. ಕಾರು ಸುರಪುರದಿಂದ ಕಲಬುರಗಿ ಕಡೆ ಬರುತ್ತಿತ್ತು. ಬಿಎಸ್‍ಸಿ ಪ್ರವೇಶಕ್ಕೆಂದು ದಾಖಲೆಗಳ ಪರಿಶೀಲನೆಗಾಗಿ ತೆರಳುತ್ತಿದ್ದರು. ಈ ವೇಳೆ ಬಲಬದಿಯ ಟೈರ್ ಬ್ಲಾಸ್ಟ್ ಆಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಜೇವರ್ಗಿ ಪೊಲೀಸರು ತಿಳಿಸಿದ್ದಾರೆ.
ದೇಶದ ಕೆಲವೆಡೆ ಕೊರೋನಾ ಎರಡನೇ ಅಲೆ ಆರಂಭ ಸಾಧ್ಯತೆ- ಡಾ.ಗುಲೇರಿಯಾ
ಕೊರೋನಾ ಸೋಂಕಿತರಿಗೆ ಹಾಸಿಗೆ ನೀಡದ 36 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್
ಕೇಂದ್ರ ಸಚಿವ ಗಡ್ಕರಿಗೆ ಕೊರೋನಾ
ಎಸ್ ಬಿ ಐ ಎಟಿಎಂ ವಿತ್ ಡ್ರಾಗೆ ಒಟಿಪಿ ಕಡ್ಡಾಯ
ಜೈಲು ಸೇರಿದ ಬಹುಭಾಷಾ ನಟಿ ಸಂಜನಾ ಗಲ್ರಾನಿ
ದುಬೈ ಈಜು ಕೊಳದಲ್ಲಿ ಕೊಹ್ಲಿ ಕೂಲ್ ಕೂಲ್