ಬೆಂಗಳೂರು: ಚಂದನವನದಲ್ಲಿ ಸಂಚಲನ ಸೃಷ್ಟಿಸಿರುವ ಮಾದಕ ದ್ರವ್ಯ ಜಾಲದ ತನಿಖೆ ಚುರುಕುಪಡೆದು ಕೊಂಡಿದೆ. ಈ ಹಿನ್ನೆಲೆಯಲ್ಲಿ ಮಾದಕ ದ್ರವ್ಯ ಜಾಲದ ನಂಟಿನ ಆರೋಪಕ್ಕೆ ಗುರಿಯಾಗಿ ಸಿಸಿಬಿ ಬಂಧನದಲ್ಲಿರುವ ಸಂಜನಾ ಮತ್ತು ರಾಗಿಣಿಯನ್ನು ಇಂದು ಸಿಸಿಬಿ ತೀವ್ರ ವಿಚಾರಣೆಗೆ ಗುರಿಪಡಿಸಲಿದೆ.
ಕಳೆದ ಒಂದು ವಾರದಿಂದ ಸಿಸಿಬಿ ವಶದಲ್ಲಿರುವ ಇಬ್ಬರು ಆರೋಪಿಗಳು ತನಿಖೆಗೆ ಪೂರ್ಣ ಸಹಕಾರ ನೀಡಿಲ್ಲ. ನಾಳೆ ಆರೋಪಿಗಳ ಸಿಸಿಬಿ ಕಸ್ಟಡಿ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಇಂದು ವಿಚಾರಣೆ ತೀವ್ರಗೊಳಿಸಲು ಸಿಸಿಬಿ ನಿರ್ಧರಿಸಿದೆ.
ಈ ಮಧ್ಯೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ನಟಿ ಸಂಜನಾ ಅವರನ್ನು ರಕ್ಷಿಸಲು ತೀವ್ರ ಒತ್ತಡ ಹೇರಿದ್ದರು ಎಂಬ ಆರೋಪ ಕೇಳಿ ಬಂದಿದೆ.