newsics.com
ಬೆಂಗಳೂರು: ಪೆಟ್ರೋಲ್ ಡೀಸೆಲ್ ದರ ಹೆಚ್ಚಳದ ಬಳಿಕ ರಾಜ್ಯದಲ್ಲಿ ಅದರಲ್ಲಿ ಮುಖ್ಯವಾಗಿ ಬೆಂಗಳೂರಿನಲ್ಲಿ ಟೊಮ್ಯಾಟೋ ದರದಲ್ಲಿ ಭಾರೀ ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಟೊಮ್ಯಾಟೋ ದರ ಕಿಲೋ 60 ರೂಪಾಯಿ ತಲುಪಿದೆ. ಒಂದು ವಾರದ ಹಿಂದೆ 10- 15 ರೂಪಾಯಿಗೆ ದೊರೆಯುತ್ತಿದ್ದ ಟೊಮ್ಯಾಟೋ ಇದೀಗ 60 ರೂಪಾಯಿ ತಲುಪಿದೆ.
ರಾಜ್ಯದಲ್ಲಿ ಈರುಳ್ಳಿ ದರ ದಲ್ಲಿ ಕೂಡ ಭಾರೀ ಹೆಚ್ಚಳವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ನಿರೀಕ್ಷಿತ ಮಟ್ಟದಲ್ಲಿ ತರಕಾರಿ ಮತ್ತು ಇತರ ಕೃಷಿ ಉತ್ಪನ್ನ ಗಳು ಮಾರುಕಟ್ಟೆ ತಲುಪುತ್ತಿಲ್ಲ. ಇದು ಕೂಡ ದರ ಹೆಚ್ಚಳಕ್ಕೆ ಕಾರಣ ಎಂದು ವರದಿಯಾಗಿದೆ.