newsics.com
ಕಲಬುರಗಿ: ಪ್ರಸಿದ್ಧ ಕಾದಂಬರಿಕಾರ ಎಸ್.ಎಲ್. ಭೈರಪ್ಪ, ಕವಿ ಚನ್ನವೀರ ಕಣವಿ, ಪರಿಸರವಾದಿ ಸಾಲುಮರದ ತಿಮ್ಮಕ್ಕ, ಬಾಹ್ಯಾಕಾಶ ವಿಜ್ಞಾನಿ ಕೆ.ಶಿವನ್, ಜಾನಪದ ಲೇಖಕ ಎಂ.ಜಿ.ಬಿರಾದಾರ್ ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್’ಗೆ ಭಾಜನರಾಗಿದ್ದಾರೆ.
ಸೆ.23ರಂದು ವರ್ಚುವಲ್ ಮಾದರಿಯಲಿ ನಡೆಯಲಿರುವ ಕೇಂದ್ರೀಯ ವಿವಿಯ ಐದನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ವಿವಿ ಹೇಳಿದೆ. 38 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 25 ವಿದ್ಯಾರ್ಥಿಗಳಿಗೆ ಪಿಎಚ್ಡಿ, 665 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ವಿವಿ ತಿಳಿಸಿದೆ.
ಅ.3ರಂದು ವಿಶ್ವದ ಅತಿ ಉದ್ದದ ‘ಅಟಲ್ ಸುರಂಗ ಮಾರ್ಗ’ ಲೋಕಾರ್ಪಣೆ
ಹಿರಿಯ ಸಾಹಿತಿ, ಕಥೆಗಾರ ಅಬ್ಬಾಸ್ ಮೇಲಿನಮನಿ ಇನ್ನಿಲ್ಲ