Thursday, August 18, 2022

ಈ ವರ್ಷದ ಜಂಬೂಸವಾರಿಯಲ್ಲಿ ಭಾಗಿಯಾಗುವ ಆನೆಗಳ ಅಂತಿಮ ಪಟ್ಟಿ ಪ್ರಕಟ

Follow Us

newsics.com

ಮೈಸೂರು :ಈ ಬಾರಿಯ ಮೈಸೂರು ದಸರಾಗೆ ರಾಜ್ಯ ಸರ್ಕಾರ ಸಕಲ ರೀತಿಯಲ್ಲಿ ಸಿದ್ಧತೆಯನ್ನು ಮಾಡಿಕೊಳ್ತಿದೆ. ಈ ಬಾರಿಯ ಜಂಬೂ ಸವಾರಿಯಲ್ಲಿ ಭಾಗಿಯಾಗಲಿರುವ ಆನೆಗಳ ಅಂತಿಮ ಪಟ್ಟಿಯನ್ನು ಬಹಿರಂಗಪಡಿಸಲಾಗಿದೆ.

ಅಭಿಮನ್ಯು ನೇತೃತ್ವದಲ್ಲಿ ಈ ಬಾರಿ ಒಟ್ಟು 14 ಆನೆಗಳು ಜಂಬು ಸವಾರಿಯಲ್ಲಿ ಇರಲಿವೆ. ಇವುಗಳಲ್ಲಿ ನಾಲ್ಕು ಹೆಣ್ಣಾನೆಗಳು ಇರಲಿವೆ.

57 ವರ್ಷದ ಅಭಿಮನ್ಯು, 38 ವರ್ಷದ ಮಹೇಂದ್ರ, 39 ವರ್ಷದ ಗೋಪಾಲಸ್ವಾಮಿ ಹಾಗೂ 22 ವರ್ಷದ ಭೀಮ ಮತ್ತಿಗೋಡು ಆನೆ ಶಿಬಿರದಿಂದ ಆಯ್ಕೆಯಾಗಿದ್ದಾರೆ. ಇತ್ತ ಬಳ್ಳೆ ಆನೆ ಶಿಬಿರದಿಂದ 63 ವರ್ಷದ ಅರ್ಜುನ ಆಯ್ಕೆಯಾಗಿದ್ದಾನೆ. ದುಬಾರೆ ಆನೆ ಶಿಬಿರದಿಂದ‌45 ವರ್ಷದ ಕಾವೇರಿ, 41 ವರ್ಷದ ಗೋಪಿ, 59 ವರ್ಷದ ವಿಕ್ರಮ, 44 ವರ್ಷದ ಧನಂಜಯ, 40 ವರ್ಷದ ಶ್ರೀರಾಮ ಹಾಗೂ 63 ವರ್ಷದ ವಿಜಯ ಆನೆ ಜಂಬೂ ಸವಾರಿಯಲ್ಲಿ ಭಾಗಿಯಾಗಲಿವೆ. ರಾಮಾಪುರ ಆನೆ‌ ಶಿಬಿರದಿಂದ 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮಿ ಹಾಗೂ‌ 18 ವರ್ಷದ ಪಾರ್ಥಸಾರಥಿ ಆನೆಗಳು ಮೈಸೂರಿಗೆ ಬರಲಿವೆ.

ಸಿನಿಮಾ ರಂಗ ತೊರೆದು ರಾಜಕೀಯ ಸೇರುತ್ತಾರಂತೆ ರಶ್ಮಿಕಾ ಮಂದಣ್ಣ!

 

ಮತ್ತಷ್ಟು ಸುದ್ದಿಗಳು

vertical

Latest News

ಪ್ರಧಾನಿ ರಕ್ಷಣೆಯ ಹೊಣೆ ಹೊತ್ತಿರುವ ಎಸ್ ಪಿ ಜಿ ಗೆ ಮುಧೋಳದ ಶ್ವಾನ ಸೇರ್ಪಡೆ

newsics.com ನವದೆಹಲಿ: ರಾಜ್ಯದ ಮುಧೋಳ ಶ್ವಾನ ಇದೀಗ ಪ್ರಧಾನಿ ಸೇರಿದಂತೆ ಗಣ್ಯರಿಗೆ ರಕ್ಷಣೆ ನೀಡುವ ವಿಶೇಷ ಭದ್ರತಾಪಡೆ ( ಎಸ್ ಪಿ ಜಿ) ಗೆ ಸೇರ್ಪಡೆಗೊಂಡಿದೆ. ಮುಧೋಳ ಶ್ವಾನ...

ಚಿನ್ನದ ದರದಲ್ಲಿ ಇಳಿಕೆ, ಬೆಳ್ಳಿ ದರ 200 ರೂಪಾಯಿ ಕಡಿಮೆ

newsics.com ಮುಂಬೈ: ಕಳೆದ ಎರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದೆ. ಚಿನ್ನದ ದರ 110 ರೂಪಾಯಿ ಕಡಿಮೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,000 ರೂಪಾಯಿಗಳಿಂದ 47,900...

ಕೊಲೆಯಾದ ಸ್ಥಿತಿಯಲ್ಲಿ ಸಾಧುವಿನ ಮೃತದೇಹ ಪತ್ತೆ

newsics.com ಜೈಪುರ:  ರಾಜಸ್ತಾನದಲ್ಲಿ ಮತ್ತೊಂದು ಸಾಧು ನಿಗೂಢವಾಗಿ ಮೃತಪಟ್ಟಿದ್ದಾರೆ. ಕೊಲೆಯಾದ  ಸ್ಥಿತಿಯಲ್ಲಿ ಸಾಧುವಿನ ಮೃತ ದೇಹ ಪತ್ತೆಯಾಗಿದೆ. ಹನುಮಾನ್ ಘಡ್ ನ ಭಾಖ್ರವಾಲಿ ಎಂಬಲ್ಲಿ ಸಾಧು ನಾಗ ಚೇತನ್ ದಾಸ್ ಎಂಬವರ ಮೃತ ದೇಹ...
- Advertisement -
error: Content is protected !!