Friday, January 21, 2022

ಟ್ರ್ಯಾಕ್ಟರ್ ಟ್ರಾಲಿ ಪಲ್ಟಿ; ಭತ್ತ ನದಿ ಪಾಲು

Follow Us

newsics.com
ಕೊಪ್ಪಳ: ನದಿ ದಾಟುವ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ, ಟ್ರಾಲಿಯಲ್ಲಿದ್ದ ಭತ್ತ ನದಿಯ ಪಾಲಾದ ಘಟನೆ ಕೊಪ್ಪಳ ತಾಲೂಕಿನ ಕವಳಿ ತಾಂಡಾದ ಬಳಿ ತುಂಗಭದ್ರಾ ನದಿಯಲ್ಲಿ ನಡೆದಿದೆ.
ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ಭತ್ತ ನೀರು ಪಾಲಾಗುತ್ತಿರುವ ಘಟನೆಯ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ನದಿ ದಡದ ಆಚೆಯಲ್ಲಿ ಬೆಳೆದಿದ್ದ ಭತ್ತವನ್ನು ಕಟಾವು ಮಾಡಿದ ರೈತ ಟ್ರ್ಯಾಕ್ಟರ್ ಮೂಲಕ ಸಾಗಿಸುವ ವೇಳೆ ಈ ಘಟನೆ ನಡೆದಿದೆ. ಎರಡು ಟ್ರ್ಯಾಕ್ಟರ್ ಮೂಲಕ ಭತ್ತ ಚೀಲ ತರುವ ವೇಳೆ ನದಿಯ ನೀರಿನಲ್ಲಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ಭತ್ತ ನೀರು ಪಾಲಾಗಿದೆ. ಸುಮಾರು 70ರಿಂದ 80 ಸಾವಿರ ಮೌಲ್ಯದ ಭತ್ತ ನೀರು ಪಾಲಾಗಿದ್ದು , ಭತ್ತ ಕಳೆದುಕೊಂಡ ರೈತ ಗುತ್ತಿಗೆ ಆಧಾರದಲ್ಲಿ ಭೂಮಿ ಪಡೆದು ಭತ್ತ ಬೆಳೆದಿದ್ದ ಎಂದು ಹೇಳಲಾಗಿದೆ.

ಶಿವಮೊಗ್ಗದಲ್ಲಿ ಬಾಂಬ್ ಸ್ಫೋಟ; 9 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

ಹಿರಿಯ ನಟ ಹೆಚ್.ಜಿ. ಸೋಮಶೇಖರ್ ಇನ್ನಿಲ್ಲ

ಸಂಜನಾ , ರಾಗಿಣಿ ಜಾಮೀನು ಅರ್ಜಿ ಹೈಕೋರ್ಟ್ ನಲ್ಲಿ ವಜಾ

ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಈ ಸ್ವೀಟ್ ನ ಬೆಲೆ ಕೆಜಿಗೆ 9 ಸಾವಿರ ರೂ!

ಅಮಿತಾಬ್ ಬಚ್ಚನ್ ವಿರುದ್ಧ ಎಫ್ ಐ ಆರ್ ದಾಖಲು

2021ರ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ ರದ್ದು

ನಾಯಿಗಳಿಗೆ ಮಾಲೀಕರಿದ್ದಾರೆ; ಬೆಕ್ಕಿಗೆ ಸಂಬಂಧಿಕರಿದ್ದಾರೆ!!

ಮತ್ತಷ್ಟು ಸುದ್ದಿಗಳು

Latest News

ಹಂತಕರ ಕಣ್ಣಿಗೆ ಖಾರದಪುಡಿ ಎರಚಿ ಪತಿಯ ಪ್ರಾಣ ಉಳಿಸಿದ‌ ಪತ್ನಿ!

newsics.com ಹೈದರಾಬಾದ್‌ : ಪತಿಯ ಹತ್ಯೆಗೆ ಬಂದಿದ್ದ ನಾಲ್ವರ ಕಣ್ಣಿಗೆ ಪತ್ನಿ ಖಾರದ ಪುಡಿ ಎರಚಿ ಪತಿಯ ಪ್ರಾಣ ಉಳಿಸಿದ ಘಟನೆ ತೆಲಂಗಾಣದ ವಾರಂಗಲ್‌ನ ಶಂಭುನಿಪೇಟೆಯಲ್ಲಿ...

ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ಜೀವಂತ ಹೃದಯ ರವಾನೆ

newsics.com ಮೈಸೂರು: ಮೆದುಳು ನಿಷ್ಕ್ರಿಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಹೃದಯವನ್ನು ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ರವಾನೆ ಮಾಡಲಾಗಿದೆ. ಜನವರಿ 18ರಂದು ರಸ್ತೆ ಅಪಘಾತದಿಂದ ದರ್ಶನ್(24) ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಯುವಕನ ಮೆದುಳು ನಿಷ್ಕ್ರಿಯವಾಗಿದ್ದ ಕಾರಣ ಅವರ...

ಒಂದೇ ಮೊಬೈಲ್ ಸಂಖ್ಯೆಯಿಂದ ಇನ್ನುಮುಂದೆ ಆರು ಮಂದಿ ಕೋವಿಡ್ ಲಸಿಕೆ ನೋಂದಾಯಿಸಬಹುದು

newsics.com ನವದೆಹಲಿ: ಕೋವಿಡ್ ಲಸಿಕೆಯನ್ನು ಹಾಕಲು ಕೋ-ವಿನ್ ವೆಬ್‌ಸೈಟ್‌ನಲ್ಲಿ ಒಂದು ಮೊಬೈಲ್ ಸಂಖ್ಯೆ ಬಳಸಿ ಆರು ಮಂದಿಯ ಹೆಸರನ್ನು ನೋಂದಾಯಿಸಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು  ತಿಳಿಸಿದೆ. ಮೊದಲು ಒಂದು ಮೊಬೈಲ್ ಸಂಖ್ಯೆಯ ಮೂಲಕ  ನಾಲ್ಕು...
- Advertisement -
error: Content is protected !!