newsics.com
ಬೆಳಗಾವಿ: ತರಬೇತಿ ವಿಮಾನವೊಂದು ತಾಂತ್ರಿಕ ತೊಂದರೆಯಿಂದ ತುರ್ತು ಭೂಸ್ಪರ್ಶ ಆಗಿದೆ. ಈ ಘಟನೆ ಬೆಳಗಾವಿ ತಾಲೂಕಿನ ಹೊನ್ನಿಹಾಳ ಹೊರವಲಯದಲ್ಲಿ ನಡೆದಿದೆ.
ರೆಡ್‌ಬರ್ಡ್ ಸಂಸ್ಥೆಗೆ ಸೇರಿದ VT- RBF ತರಬೇತಿ ವಿಮಾನ ಇದಾಗಿದ್ದು, ಘಟನೆ ನಡೆದ ವೇಳೆ ವಿಮಾನದಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರೆಂಬ ಮಾಹಿತಿ ಲಭಿಸಿದೆ.
ತಾಲೂಕಿನ ಸಾಂಬ್ರಾ ಏರ್‌ಪೋರ್ಟ್‌ನಿಂದ ಹೊರಟಿದ್ದ ತರಬೇತಿ ವಿಮಾನ ತಾಂತ್ರಿಕ ತೊಂದರೆಯಿಂದಾಗಿ ಹೊಲದಲ್ಲಿ ತುರ್ತು ಭೂಸ್ಪರ್ಶವಾಗಿದೆ.
ಆಪರೇಷನ್ ಪಠ್ಯ ಪುಸ್ತಕ; ಪಠ್ಯಗಳ ಪರಿಷ್ಕರಿಸ್ತೇವೆಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ