Tuesday, March 9, 2021

ಬೇಡಗುಳಿ ಕಾಫಿ ಎಸ್ಟೇಟ್‌’ನಲ್ಲಿ ಟಿವಿಎಸ್‌ ಮುಖ್ಯಸ್ಥ ವೇಣು ವಾಸ್ತವ್ಯ

newsics.com
ಚಾಮರಾಜನಗರ: ದೇಶದ ಪ್ರಮುಖ ಕೈಗಾರಿಕೋದ್ಯಮಿ ಹಾಗೂ ಟಿವಿಎಸ್‌ ಸಮೂಹದ ಅಧ್ಯಕ್ಷ ವೇಣು ಶ್ರೀನಿವಾಸನ್‌ ಅವರು ಜಿಲ್ಲೆಯ ಬೇಡಗುಳಿ ಕಾಫಿ ಎಸ್ಟೇಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಬೇಡಗುಳಿಯಲ್ಲಿರುವ ಕಂಪನಿಗೆ ಸೇರಿದ ಕಾಫಿ ಎಸ್ಟೇಟ್‌ನಲ್ಲಿ ಗುರುವಾರದಿಂದ (ಡಿ.23) ವಾಸ್ತವ್ಯ ಹೂಡಿದ್ದಾರೆ.
ಬೇಡಗುಳಿಯಲ್ಲಿ ಟಿವಿಎಸ್‌ ಕಂಪನಿ ಮಾಲೀಕತ್ವದ ಎಮರಾಲ್ಡ್‌ ಹೆವನ್‌ ಕಾಫಿ ಎಸ್ಟೇಟ್‌ ಇದ್ದು, ಗುರುವಾರ ಅವರು ಇಲ್ಲಿಗೆ ಬಂದಿದ್ದಾರೆ. ಇನ್ನೂ ಎರಡು ದಿನ ಎಸ್ಟೇಟ್‌ನಲ್ಲೇ ತಂಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವೇಣು ಅವರು ಹೆಲಿಕಾಪ್ಟರ್‌ ಮೂಲಕ ಇಲ್ಲಿಗೆ ಬಂದಿದ್ದು, ಚಾಮರಾಜನಗರ ತಾಲ್ಲೂಕಿನ ಕೋಳಿಪಾಳ್ಯ ಹಾಗೂ ಪುಣಜನೂರು ನಡುವೆ ಇರುವ ಬೆಜ್ಜಲುಪಾಳ್ಯದ ಖಾಸಗಿ ಜಮೀನಿನಲ್ಲಿ ತಾತ್ಕಾಲಿಕ ಹೆಲಿಪ್ಯಾಡ್‌ ನಿರ್ಮಿಸಲಾಗಿದೆ.
ಹೆಲಿಪ್ಯಾಡ್‌ ನಿರ್ಮಿಸಿರುವ ಪ್ರದೇಶ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ ಪರಿಸರ ವಲಯದ (ಇಎಸ್‌ಝಡ್‌) ವ್ಯಾಪ್ತಿಯಲ್ಲಿದ್ದು, ಹೆಲಿಕಾಪ್ಟರ್‌ ಇಳಿಯಲು ಅರಣ್ಯ ಇಲಾಖೆ ಅನುಮತಿ ಹೇಗೆ ನೀಡಿತು ಎಂದು ಪರಿಸರವಾದಿಗಳು ಪ್ರಶ್ನಿಸಿದ್ದಾರೆ.
ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸರು, ಲೋಕೋಪಯೋಗಿ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲರಿಂದಲೂ ಅಭಿಪ್ರಾಯ ಪಡೆದು ಅನುಮತಿ ನೀಡಲಾಗಿದೆ. ಅರಣ್ಯ ಭಾಗದಲ್ಲಿ ಹೆಲಿಕಾಪ್ಟರ್‌ ಇಳಿದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸ್ಪಷ್ಟಪಡಿಸಿದ್ದಾರೆ.

21 ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಆರ್ಯ ತಿರುವನಂತಪುರಂ ಮುಂದಿನ ಮೇಯರ್!

ಟರ್ಕಿಯಲ್ಲಿ ಚಿನ್ನದ ಭಾರೀ ನಿಕ್ಷೇಪ ಪತ್ತೆ

ವದಂತಿ ನಂಬದಿರಲು ರೈತರಿಗೆ ಮತ್ತೆ ಪ್ರಧಾನಿ ಮೋದಿ ಮನವಿ

 

ಮತ್ತಷ್ಟು ಸುದ್ದಿಗಳು

Latest News

ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಸಾಧ್ಯತೆ

newsics.com ಡೆಹ್ರಾಡೂನ್:  ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಸಂಜೆ ನಾಲ್ಕು ಗಂಟೆಗೆ ಅವರು ರಾಜ್ಯಪಾಲರನ್ನು ಭೇಟಿ...

ಕೊರೋನಾ ಲಸಿಕೆ ಪಡೆದ 48 ಗಂಟೆ ತನಕ ವಿಮಾನ ಚಲಾಯಿಸುವಂತಿಲ್ಲ

newsics.com ನವದೆಹಲಿ:  ಕೊರೋನಾ ಲಸಿಕೆ ಸ್ವೀಕಾರ ಸಂಬಂಧ ವಿಮಾನಯಾನ ಸಿಬ್ಬಂದಿಗೆ ನಾಗರಿಕ ವಿಮಾನಯಾನ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ವಿಮಾನದ ಪೈಲಟ್ ಮತ್ತು ಇತರ ಸಿಬ್ಬಂದಿ ಕೊರೋನಾ ಲಸಿಕೆ ಪಡೆದಿದ್ದರೆ ಇದನ್ನು ಕಟ್ಟು ನಿಟ್ಟಾಗಿ...

ಧೂಪದ ಮರ ಕಡಿಯುವಾಗ ಸಿಲುಕಿ ಮೂವರು ಯುವಕರ ಸಾವು

newsics.comಮಂಗಳೂರು: ಧೂಪದ ಮರ‌ ಕಡಿಯುವ ವೇಳೆ ಮೂವರು ಮರದಡಿ ಸಿಲುಕಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಸಮೀಪ ಮಂಗಳವಾರ ನಡೆದಿದೆ.ಪಟ್ರಮೆ ಗ್ರಾಮದ ಅನಾರು ಬಳಿ‌...
- Advertisement -
error: Content is protected !!