newsics.com
ಚಿಕ್ಕಬಳ್ಳಾಪುರ: ಇಲ್ಲಿನ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ಪರೀಕ್ಷೆ ಎರಡೂವರೆ ಗಂಟೆ ವಿಳಂಬವಾಗಿ ಆರಂಭವಾಗಿದೆ.
ಬಿಎಸ್ಸಿ ಅಂತಿಮ ವರ್ಷದ ಪರೀಕ್ಷೆ ಇಂದು (ಸೆ.26) ನಿಗದಿಯಾಗಿತ್ತು. ಆದರೆ ಬೆಂಗಳೂರು ವಿಶ್ವವಿದ್ಯಾಲಯ ನಿಗದಿತ ವೇಳೆಯಲ್ಲಿ ಪ್ರಶ್ನೆಪತ್ರಿಕೆ ತಲುಪಿಸದಿದ್ದುದೇ ಈ ವಿಳಂಬಕ್ಕೆ ಕಾರಣ ಎನ್ನಲಾಗಿದೆ. ಎರಡು ಗಂಟೆಗೆ ಆರಂಭವಾಗಬೇಕಿದ್ದ ಪರೀಕ್ಷೆ ನಾಲ್ಕೂವರೆಗೆ ಆರಂಭವಾಗಿದೆ ಎಂದು ತಿಳಿದುಬಂದಿದೆ. ಪ್ರಶ್ನೆಪತ್ರಿಕೆ ವಿಳಂಬವಾಗಿ ಸಿಕ್ಕಿದ್ದರಿಂದ ಎರಡು ಗಂಟೆಗೆ ನೀಡಬೇಕಿದ್ದ ಪ್ರಶ್ನೆಪತ್ರಿಕೆಯನ್ನು 4:30ಕ್ಕೆ ನೀಡಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ. ಪರೀಕ್ಷೆ ವಿಳಂಬಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಶ್ನೆಪತ್ರಿಕೆ ಸಿಗದೆ ಬಿಎಸ್ಸಿ ಪರೀಕ್ಷೆ ಎರಡೂವರೆ ಗಂಟೆ ವಿಳಂಬ!
Follow Us