Monday, November 29, 2021

ಕಲುಷಿತ ನೀರು ಸೇವಿಸಿ ಇಬ್ಬರು ಸಾವು, ಹಲವರು ಅಸ್ವಸ್ಥ

Follow Us

newsics.com

ವಿಜಯಪುರ: ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿ, ಹಲವರು ಅಸ್ವಸ್ಥಗೊಂಡಿರುವ ಘಟನೆ ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಯರಗಲ್ ಗ್ರಾಮದಲ್ಲಿ ನಡೆದಿದೆ.

ಕುಡಿಯುವ ನೀರಿಗೆ ಚರಂಡಿ ನೀರು ಸೇರ್ಪಡೆಯಾಗಿದ್ದು, ಇದನ್ನು ಕುಡಿದು ಇಬ್ಬರು ಮೃತಪಟ್ಟಿದ್ದಾರೆ. ಗ್ರಾಮದ ನಿವಾಸಿಗಳು ಅಸ್ವಸ್ಥಗೊಂಡಿದ್ದಾರೆ. ಮೃತರನ್ನು ಯರಗಲ್ ಗ್ರಾಮದ ಗುರುರಾಜ್ ಬಸವರಾಜ ಮಳಗಿ (15) ಮತ್ತು ನೀಲಮ್ಮ ನಾರಾಯಣಪ್ಪ ಬೆನಕಣ್ಣವರ(65) ಎಂದು ಗುರುತಿಸಲಾಗಿದೆ.

ಅಸ್ವಸ್ಥರು ಮುದ್ದೇಬಿಹಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರು ಗುಣಮುಖಾರಾಗಿದ್ದಾರೆ. ಆರೋಗ್ಯ ಇಲಾಖೆಯ ತಂಡ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದ್ದು, ಮುಂಜಾಗ್ರತಾ ಕ್ರಮವಾಗಿ ಮಾತ್ರೆಗಳನ್ನು ವಿತರಿಸಲಾಗಿದೆ.

ಸ್ಥಳೀಯಾಡಳಿತ ಕುಡಿಯುವ ನೀರು ಪೂರೈಸುವ ಕುರಿತು ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಓರ್ವ ನಾಗರಿಕ ಸಾವು

ಮತ್ತಷ್ಟು ಸುದ್ದಿಗಳು

Latest News

ಕೃಷ್ಣನ ವಿಗ್ರಹ ಸ್ಥಾಪನೆ ಹೇಳಿಕೆ: ಮಥುರಾದಲ್ಲಿ ನಿಷೇಧಾಜ್ಞೆ

newsics.com ಮಥುರಾ(ಉತ್ತರ ಪ್ರದೇಶ): ಕೃಷ್ಣನ ಜನ್ಮಸ್ಥಾನ ಪ್ರದೇಶದಲ್ಲಿ ಭಗವಾನ್ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ಮಾಡುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಹೇಳಿಕೆಯ ಬೆನ್ನಲ್ಲೇ ಮಥುರಾದಲ್ಲಿ ಸೆಕ್ಷನ್ 144...

ತಿರುಮಲ ತಿರುಪತಿ ದೇವಸ್ಥಾನಮ್’ನ ಒಎಸ್’ಡಿ ಡಾಲರ್ ಶೇಷಾದ್ರಿ ನಿಧನ

newsics.com ವಿಶಾಖಪಟ್ಟಣಂ: ತಿರುಮಲ ತಿರುಪತಿ ದೇವಸ್ಥಾನಮ್ ನ ಪ್ರಧಾನ ಅರ್ಚಕ ಡಾಲರ್ ಶೇಷಾದ್ರಿ ನಿಧನರಾದರು. ಟಿಟಿಡಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಶೇಷಾದ್ರಿ ಅವರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು...

ಪುನೀತ್ ನಿಧನಕ್ಕೆ ಒಂದು ತಿಂಗಳು: ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು

newsics.com ಬೆಂಗಳೂರು: ನಟ ಪುನೀತ್ ರಾಜಕುಮಾರ್ ನಿಧನರಾಗಿ ಇಂದಿಗೆ ಒಂದು ತಿಂಗಳು. ಹಿನ್ನೆಲೆಯಲ್ಲಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಸೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಕುಟುಂಬಸ್ಥರು ಅಪ್ಪು...
- Advertisement -
error: Content is protected !!