newsics.com
ಗದಗ: ಜೈನ್ ಮಂದಿರ ಹಾಗೂ ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗದಗ ಮೂಲದ ಮುತ್ತು ಅಲಿಯಾಸ್ ಪ್ರಶಾಂತ್ ಕುಮಾರ್ ಬಿನ್ನಾಳ ಮತ್ತು ಶಾಮ ವಾಲ್ಮೀಕಿ ಬಂಧಿತ ಆರೋಪಿಗಳು. ನಗರದ ಹಲವೆಡೆ ಕಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳಿಂದ 145 ಗ್ರಾಂ ಬಂಗಾರ, 280 ಗ್ರಾಂ ಬೆಳ್ಳಿ, 10 ಕೆಜಿ ಪಂಚಲೋಹದ ಮೂರ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಎಸ್ಪಿ ಬಿ.ಎಸ್. ನೇಮಗೌಡ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿತರಿಂದ ಒಟ್ಟು 8 ಲಕ್ಷ 89 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ದಾಖಲೆ ಇಲ್ಲದ ಹಣದ ಸಮೇತ ಕಾರನ್ನು ವಶಕ್ಕೆ ಪಡೆದ ಪೊಲೀಸರು
80 ಅಡಿ ಆಳದ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ