newsics.com
ಉಡುಪಿ: ಜಿಲ್ಲೆಯ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೀನಾ ಡಿಸೋಜಾ ಅವರಿಗೆ ವ್ಯಕ್ತಿಯೊಬ್ಬ ಚೂರಿಯಿಂದ ಇರಿದಿದ್ದಾನೆ.
ಕಳೆದ ರಾತ್ರಿ ಮನೆ ಪಕ್ಕದಲ್ಲಿ ರೀನಾ ಡಿಸೋಜಾ ತನ್ನ ಗೆಳತಿ ಜತೆ ಮಾತನಾಡುತ್ತಿದ್ದಾಗ ಪಾನಮತ್ತನಾಗಿದ್ದ ನೆರೆಮನೆಯ ಸುಮಾರು 45 ವರ್ಷದ ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ ಜಗಳಕ್ಕಿಳಿದಿದ್ದಾನೆ. ಮಾತಿನ ಚಕಮಕಿ ವೇಳೆ ರೀನಾ ಅವರಿಗೆ ಚಾಕು ಇರಿದಿದ್ದಾನೆ.
ಕೂಡಲೇ ಸ್ಥಳೀಯರು ರೀನಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತೀವ್ರ ರಕ್ತಸ್ರಾವ ಹಿನ್ನೆಲೆಯಲ್ಲಿ ರೀನಾ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ರೀನಾ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ನಾನು ಕುಡಿತ ಬಿಡುವ ಕೋರ್ಸ್ ಮಾಡುತ್ತಿದ್ದೇನೆ. ಸ್ಥಿಮಿತ ಕಳೆದುಕೊಂಡು ಹೀಗೆ ಮಾಡಿದ್ದೇನೆ ಎಂದು ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವದಂತಿ ಬೆನ್ನಲ್ಲೇ ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ತುಸು ಸುಧಾರಣೆ ಎಂದ ವೈದ್ಯರು
ಪ್ರಬಲ, ವೇಗವಾಗಿ ಹರಡಬಲ್ಲ ಕೊರೋನಾ ರೂಪಾಂತರಿ ಉಪ ಪ್ರಬೇಧ ಪತ್ತೆ: ಹೆಚ್ಚಿದ ಆತಂಕ
ಕಲ್ಯಾಣಮಂಟಪಕ್ಕೆ ಡಾನ್ಸ್ ಮಾಡುತ್ತಾ ವಧು ಎಂಟ್ರಿ, ವರನಿಂದ ಕಪಾಳಮೋಕ್ಷ , ಮದುವೆಗೆ ಮೊದಲೇ ಬ್ರೇಕ್ ಅಪ್