Newsics.Com
ಉಡುಪಿ: ಅಣ್ಣ ತಮ್ಮನ ನಡುವೆ ಜಮೀನಿಗಾಗಿ ಜಗಳವಾಗಿದ್ದು, ಮನನೊಂದ ತಮ್ಮ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಸಚ್ಚೇರಿಪೇಟೆಯಲ್ಲಿ ನಡೆದಿದೆ.
ಮನೆಯಲ್ಲೇ ಅಣ್ಣ ತಮ್ಮ ಜಗಳ ಆಡಿದ್ದಾರೆ. ತಮ್ಮ ಕೃಷ್ಣ ಅಣ್ಣನ ಮನೆಗೆ ಬೆಂಕಿ ಇಡಲು ಪ್ರಯತ್ನಿಸಿದ್ದಾನೆ. ನಂತರ ಅಲ್ಲಿಂದ ಹೋಗಿದ್ದಾನೆ. ಮನನೊಂದು ಕೃಷ್ಣ ಸಫಲಿಗ ಖಿನ್ನತೆಗೆ ಒಳಗಾಗಿ ತಮ್ಮ ಕಾರಿನಲ್ಲಿ ಕುಳಿತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ರಾತ್ರಿ 3 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ, ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದವರು ಸ್ಥಳಕ್ಕೆ ಬಂದು ಮಾಹಿತಿ ಕಲೆ ಹಾಕಿದ್ದಾರೆ. ಕಾರ್ಕಳ ಗ್ರಾಮಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ಎಂದು ದಾಖಲಾಗಿದೆ.