ಬೆಂಗಳೂರು: ಮಾದಕ ದ್ರವ್ಯ ಸೇವಿಸಿದ್ದಾರೆ ಎಂದು ಶಂಕಿಸಲಾಗಿರುವ ವಿದೇಶಿಯರ ಗುಂಪೊಂದು ಮಧ್ಯರಾತ್ರಿ ಯಲಹಂಕದ ಬಳಿ ಭಾರೀ ಗದ್ದಲ ಮಾಡಿದೆ. ಸ್ಥಳೀಯರ ಜತೆ ವಾಗ್ವಾದ ಕೂಡ ನಡೆಸಿದೆ.
ಯಲಹಂಕದ ಸಂಭ್ರಮ ಕಾಲೇಜು ಬಳಿ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ. ಯುವತಿಯರೂ ಕೂಡ ಈ ಗುಂಪಿನಲ್ಲಿದ್ದರು. ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಅವರ ಮನವೊಲಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಪ್ರತಿಯಾಗಿ ಪೊಲೀಸರ ವಿರುದ್ಧ ಕೆಲವು ಅವಾಚ್ಯ ಶಬ್ದ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.
ಯಲಹಂಕ ನ್ಯೂ ಟೌನ್ ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ