Saturday, November 26, 2022

ಲಸಿಕೆ ಕಂಡು ಓಡಿದರು ಸೋಲಿಗರು… ಮನವೊಲಿಸುವಲ್ಲಿ ಸೋತರು ಸಚಿವ ಸುರೇಶ್’ಕುಮಾರ್!

Follow Us

newsics.com

ಚಾಮರಾಜನಗರ: ಇವರಿಗೆ ಲಸಿಕೆ ನೀಡಲು ಜಿಲ್ಲಾಡಳಿತ ಹರಸಾಹಸಪಡುತ್ತಿದ್ದರೂ ಸಾಧ್ಯವಾಗಿಲ್ಲ.

ಚಾಮರಾಜನಗರ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಆಶಾ ಕಾರ್ಯಕರ್ತೆಯರೂ ಸೇರಿ‌ ಹಲವರು ಯತ್ನಿಸಿ ವಿಫಲರಾಗಿದ್ದಾರೆ. ಇದೇ ಸಾಲಿಗೆ ಈಗ ಶಿಕ್ಷಣ ಸಚಿವ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶಕುಮಾರ್ ಕೂಡ ಸೇರಿದ್ದಾರೆ.

ಹೌದು, ಇವರೆಲ್ಲ ಸೋಲಿಗರು. ಲಸಿಕೆ ನೀಡುವ ಉದ್ದೇಶದಿಂದ ಯಳಂದೂರಿನ ಪುರಾಣಿ ಪೋಡಿಗೆ ಹೋದವರೆಲ್ಲ ನಿರಾಶರಾಗಿ ಹಿಂತಿರುಗಿದ್ದಾರೆ. ಶುಕ್ರವಾರ ಸಚಿವರಿಗೂ ಇದೇ ಅನುಭವವಾಗಿದೆ. 140 ಸೋಲಿಗರ ಪೈಕಿ ಈವರೆಗೆ ಕೇವಲ 7 ಸೋಲಿಗರಿಗೆ ಮಾತ್ರ ಲಸಿಕೆ ನೀಡಿಕೆ ಸಾಧ್ಯವಾಗಿದೆ.

ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯ ಪುರಾಣಿ ಪೋಡಿನಲ್ಲಿ ಗಿರಿಜನರಿಗೆ ಸಚಿವರ ಸಮ್ಮುಖದಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ಶುಕ್ರವಾರ ಆರೋಗ್ಯ ಇಲಾಖೆ ಹಮ್ಮಿಕೊಂಡಿತ್ತು. ಸಚಿವರು, ಶಾಸಕರು ಮತ್ತು ಪಂಚಾಯಿತಿ ಸದಸ್ಯರು ಬರುವ ಸುಳಿವು ದೊರಕುತ್ತಲೇ ಬಹುತೇಕ ಸೋಲಿಗರು ಕಾಡಿನತ್ತ ಕಾಲ್ಕಿತ್ತರು. ಇನ್ನೂ ಕೆಲವರು ಮನೆಯೊಳಗೇ ಅಡಗಿ ಕುಳಿತರು!

ಆದರೂ ಸೋಲಿಗರನ್ನು ಹುಡುಕಲು ಮುಂದಾದ ಸಚಿವ ಸುರೇಶಕುಮಾರ್ ಗುಡಿಸಲಿನೊಳಗೆ ಹೋಗಿದ್ದು, ಆಗ ಸೋಲಿಗ ಮಹಿಳೆ ಇವರನ್ನು ಮನೆಯೊಳಗೆ ಬಿಟ್ಟವರಾರು ಎಂದು ದಬಾಯಿಸಿದ ಪ್ರಸಂಗವೂ ನಡೆಯಿತು.

ನದಿಗಳ ನೀರಲ್ಲೂ ಕೊರೋನಾ‌ ವೈರಸ್ ಪತ್ತೆ!

ಅಕ್ಟೋಬರ್’ನಲ್ಲೇ ಭಾರತಕ್ಕೆ‌ ಕೊರೋನಾ ಮೂರನೇ ಅಲೆ: ಶೇ.85 ತಜ್ಞರ ಅಭಿಮತ

ಪಕ್ಷ ವಿರೋಧಿ ಹೇಳಿಕೆ ನೀಡಿದವರ ವಿರುದ್ಧ ಶಿಸ್ತು ಕ್ರಮ: ಅರುಣ್ ಸಿಂಗ್

ಚೆನ್ನೈನ 4 ಸಿಂಹಗಳಿಗೆ ಡೆಲ್ಟಾ ಮಾದರಿ ಕೊರೋನಾ ಸೋಂಕು

ಮತ್ತಷ್ಟು ಸುದ್ದಿಗಳು

vertical

Latest News

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...
- Advertisement -
error: Content is protected !!