newsics.com
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸರಳ ವಾಸ್ತು ತಜ್ಞ ಚಂದ್ರಶೇಖರ್ ಕೊಲೆ ಸಾಕಷ್ಟು ಆಯಾಮಗಳನ್ನು ಪಡೆದುಕೊಳ್ತಿದೆ. ಗುರೂಜಿಗಳ ಸಾವಿನ ಹಿಂದೆ ಭಕ್ತರು ಇದ್ದಾರಾ ಅಥವಾ ಆಪ್ತರೇ ಚಂದ್ರ ಶೇಖರ್ರನ್ನು ಕೊಲೆ ಮಾಡಿದ್ದಾರಾ ಎಂಬ ಅನುಮಾನಗಳು ಮೂಡಿವೆ.
ಈ ಎಲ್ಲದರ ನಡುವೆ ಚಂದ್ರಶೇಖರ್ ಗುರೂಜಿ ಸಾವಿನ ಹಿಂದೆ ಹೆಣ್ಣಿನ ಕರಿನೆರಳು ಕೂಡ ಕಾಣಿಸಿಕೊಂಡಿದೆ. 2019ರವರೆಗೆ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವನಜಾಕ್ಷಿ ಎಂಬಾಕೆಯ ಹೆಸರಿನಲ್ಲಿ ಚಂದ್ರಶೇಖರ್ ಗುರೂಜಿ ಬೇನಾಮಿ ಆಸ್ತಿಯನ್ನು ಮಾಡಿದ್ದರು ಎನ್ನಲಾಗಿದೆ.
ವನಜಾಕ್ಷಿ ಹೆಸರಿನಲ್ಲಿ ಫ್ಲ್ಯಾಟ್ ಸೇರಿದಂತೆ ಸಾಕಷ್ಟು ಆಸ್ತಿಗಳನ್ನು ಗುರೂಜಿ ಮಾಡಿದ್ದರು. ಈಕೆ ಸದ್ಯ ನಾಪತ್ತೆಯಾಗಿರುವ ಆರೋಪಿ ಮಹಂತೇಶ್ ಪತ್ನಿ ಕೂಡ ಹೌದು. ಸಧ್ಯ ಹುಬ್ಬಳ್ಳಿಯ ಗೋಕುಲ್ ನಗರ ಠಾಣಾ ಪೊಲೀಸರು ವನಜಾಕ್ಷಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.