newsics.com
ಮೈಸೂರು: ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮಗಳನ್ನು ಮುಗಿಸಿ ಮೈಸೂರಿಗೆ ತೆರಳಿದ್ದಾರೆ.
ಮೋದಿ ಅವರು ಇಂದು ರಾತ್ರಿ ಮೈಸೂರಿನಲ್ಲಿ ತಂಗಲಿದ್ದು, ಅವರಿಗೆ ಶುದ್ಧ ಸಸ್ಯಾಹಾರಿ ಊಟ ಉಪಚಾರದ ಮೆನು ರೆಡಿಯಾಗಿದೆ.
ರಾತ್ರಿಯ ಊಟಕ್ಕೆ ಕಿಚಡಿ, ಗುಜರಾತಿ ಕರಿ, ರೋಟಿ, ದಾಲ್, ರೈಸ್, ಎರಡು ರೀತಿಯ ಸಬ್ಜಿ, ಮೊಸರು, ಮಿಕ್ಸ್ ಫ್ರೂಟ್ ಒಳಗೊಂಡ ಮೆನು ತಯಾರಿಸಲಾಗಿದೆ.
ನಾಳೆ ಬೆಳಗಿನ ಉಪಾಹಾರಕ್ಕೆ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ-ಸಾಂಬಾರ್ , ಬ್ರೆಡ್ ಬಟರ್, ಮಿಕ್ಸ್ ಫ್ರೂಟ್, ಮಧ್ಯಾಹ್ನದ ಊಟಕ್ಕೆ ವೆಜಿಟೇಬಲ್ ಸೂಪ್, ಮಸಾಲ ಮಜ್ಜಿಗೆ ರೋಟಿ, ಜೀರಾ ರೈಸ್, ದಾಲ್ ಹಾಗೂ ಮಿಕ್ಸ್ ಫ್ರೂಟ್ ಇರಲಿದೆ.