Newsics.com
ಬೆಂಗಳೂರು: ಸೇನಾಧಿಕಾರಿಗಳ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ನಾಲ್ವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರು olx ವೆಬೈ ಸೈಟ್ ನಲ್ಲಿ ವಾಹನ ಮಾರಾಟಕ್ಕೆ ಜಾಹೀರಾತು ನೀಡುತ್ತಿದ್ದರು. ಮಾತುಕತೆ ಸಂದರ್ಭದಲ್ಲಿ ತಮ್ಮನ್ನು ತಾವು ಸೇನಾಧಿಕಾರಿಗಳು ಎಂದು ಪರಿಚಯ ಮಾಡಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ.
ಬಂಧಿತ ಎಲ್ಲ ಆರೋಪಿಗಳು ರಾಜಸ್ತಾನ ಮೂಲದವರಾಗಿದ್ದಾರೆ. ಬಂಧಿತರನ್ನು ವಾಜೀಬ್ ಖಾನ್, ಸಾಹೀಲ್, ಉಮೇರ್ ಖಾನ್ ಮತ್ತು ಸಾಹೀದ್ ಎಂದು ಗುರುತಿಸಲಾಗಿದೆ.
ನಾವು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ನಮ್ಮಗೆ ವರ್ಗಾವಣೆಯಾಗಿದ್ದು ಈ ಹಿನ್ನೆಲೆಯಲ್ಲಿ ವಾಹನ ಮಾರಾಟ ಮಾಡುತ್ತಿದ್ದೇವೆ ಎಂದು ನಂಬಿಸುತ್ತಿದ್ದರು. ಹಣ ಪಡೆದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗುತ್ತಿದ್ದರು ಎಂದು ವರದಿಯಾಗಿದೆ.
20ಕ್ಕೂ ಹೆಚ್ಚು ಮಂದಿಗೆ ಈ ರೀತಿ ಆರೋಪಿಗಳು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.