ಮೈಸೂರು; ಸಂಗೀತ ವಿದ್ವಾಂಸರಾದ ಡಾ.ರಾ.ಸತ್ಯನಾರಾಯಣ (93) ಅವರು ಗುರುವಾರ ರಾತ್ರಿ ನಿಧನರಾದರು. ಅವರಿಗೆ ಪುತ್ರಿ ನಂದಕುಮಾರ್, ಪುತ್ರಿ ರೋಹಿಣಿ ಇದ್ದಾರೆ.
ಕರ್ನಾಟಕ ಸಂಗೀತದಲ್ಲಿ ವಿದ್ವತ್ ಪಡೆದಿದ್ದ ಇವರು 2018ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಇವರ ಪಾರ್ಥೀವ ಶರೀರಕ್ಕೆ ಚೆನ್ನಪಟ್ಟಣದ ರಸಋಷಿ ಪ್ರತಿಷ್ಠಾನ ಸಂಶೋದನಾ ಕೇಂದ್ರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.