newsics.com
ಮದುವೆ ಮಂಟಪದಲ್ಲಿ ಹಾರ ಬದಲಾಯಿಸುತ್ತಿದ್ದಾಗ ವಧುವಿನ ಕುತ್ತಿಗೆಗೆ ವರನ ಕೈ ತಾಗಿತು ಎಂಬ ಒಂದೇ ಕಾರಣಕ್ಕೆ ಸಿಟ್ಟಿಗೆದ್ದ ವಧು ಮದುವೆಯನ್ನೇ ರದ್ದುಗೊಳಿಸಿದ ಘಟನೆಯು ಬೆಳ್ತಂಗಡಿ ತಾಲೂಕಿನ ನಾರಾವಿ ಎಂಬಲ್ಲಿ ನಡೆದಿದೆ.
ನಾರಾವಿ ದೇವಸ್ಥಾನದ ಸಭಾಭವನದಲ್ಲಿ ಮುಡುಕೊಣಾಜೆ ಮೂಲದ ಯುವತಿಯೊಂದಿಗೆ ಬೆಳ್ತಂಗಡಿಯ ಯುವಕನ ಮದುವೆ ನಡೆಯುತ್ತಿತ್ತು . ಮದುವೆ ಮಂಟಪದಲ್ಲಿಯೇ ಕೋಪಗೊಂಡ ವಧು ತಾಳಿ ಸಹಿತ ಹೂವಿನ ಹಾರವನ್ನು ಎಸೆದು ಮದುವೆ ರದ್ದುಗೊಳಿಸಿದ್ದಾಳೆ.
ಪೊಲೀಸರು ಮಧ್ಯ ಪ್ರವೇಶಿಸಿದಾಗ ಯುವತಿಯು ನನ್ನನ್ನು ನೋಡಲು ಬಂದ ಹುಡುಗನೇ ಬೇರೆ ಮದುವೆಯಾಗುತ್ತಿರುವ ಹುಡುಗನೇ ಬೇರೆ ಎಂದು ಆರೋಪಿಸಿದ್ದಾಳೆ ಎನ್ನಲಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2685 ಕೋವಿಡ್ ಪ್ರಕರಣ ವರದಿ: 33 ಮಂದಿ ಸಾವು