Wednesday, December 7, 2022

ವಸುಂಧರಾ ರಾಜೇ ಹಾದಿಯಲ್ಲಿ ಯಡಿಯೂರಪ್ಪ?

Follow Us

ಬೆಂಗಳೂರು:  ರಾಜ್ಯ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಸಮಾಧಾನ ಹೊಂದಿದ್ದಾರೆ. ಇದು ಬಹಿರಂಗವಾಗಿ ಪ್ರಕಟಗೊಂಡಿದೆ. ಸಚಿವ ಸಂಪುಟ ವಿಸ್ತರಣೆಗೆ ಯಾಕೆ ಕಾಲ ಕೂಡಿ ಬಂದಿಲ್ಲ ಎಂಬ ಸರಳ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಭೇಟಿಗೆ ಸಮಯ ನಿಗದಿಯಾಗಿಲ್ಲ ಎಂಬ ಉತ್ತರ ಕೇಳಿ ಬರುತ್ತಿದೆ. ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ವೈಯಕ್ತಿಕ ಭೇಟಿಯಾಗದಿದ್ದರೂ ಕ್ಲಿಷ್ಟ ಸಮಸ್ಯೆಗಳನ್ನು  ನಿಮಿಷಾರ್ಧದಲ್ಲಿ ಬಗೆಹರಿಸಬಹುದು. ಮಾತುಕತೆ ಕೂಡ ಸಾಧ್ಯ. ಆದರೇ ಬೇಕಾಗಿರುವುದು ಇಚ್ಚಾಶಕ್ತಿ ಮಾತ್ರ. ರಾಜ್ಯದಲ್ಲಿ ಯಡಿಯೂರಪ್ಪ ಹೆಚ್ಚಿಸಿಕೊಂಡಿರುವ ಜನಪ್ರಿಯತೆಯಿಂದ ದೂರದ ದೆಹಲಿಯಲ್ಲಿರುವ ಕೆಲವು ನಾಯಕರು ಭಯಪಡುತ್ತಿದ್ದಾರೆ. ಇದಕ್ಕಾಗಿ ಪಕ್ಷದ ಮೇಲೆ ನಿಯಂತ್ರಣ ಇದೆ ಎಂಬುದನ್ನು ತೋರಿಸುವ ಸಲುವಾಗಿ ವಿಳಂಬ ತಂತ್ರ ಎನ್ನುತ್ತಿವೆ ಕೆಲವು ಮೂಲಗಳು. ಇಂತಹ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ರಾಜಸ್ತಾನ ಮುಖ್ಯಮಂತ್ರಿಯಾಗಿದ್ದ ವಸುಂಧರಾ ರಾಜೇ ಸಿಂಧಿಯಾ ಅವರ ಮಾದರಿ ಅನುಸರಿಸಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಅಂದು ಆಡಳಿತದಲ್ಲಿದ್ದ ಬಿಜೆಪಿಯ ಮುಖ್ಯಮಂತ್ರಿಗಳ ಪೈಕಿ ವಸುಂಧರಾ ರಾಜೇ ಭಿನ್ನವಾಗಿದ್ದರು.  ರಾಜಸ್ತಾನದಲ್ಲಿ ಮುಖ್ಯಮಂತ್ರಿ ಮಾತೇ ಅಂತಿಮ. ಇದರಲ್ಲಿ ಎರಡು ಮಾತಿಲ್ಲ ಎಂದು ಖಡಾಖಂಡಿತವಾಗಿ ಸ್ಪಷ್ಟಪಡಿಸಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೂ ಅಗತ್ಯಕಿಂತ ಹೆಚ್ಚಿಗೆ ಮಣಿಹಾಕಲು ಅವರು ನಿರಾಕರಿಸಿದ್ದರು.  ತಮ್ಮ ವೈಯಕ್ತಿಕ ಇಮೇಜ್ ಉಳಿಸಿಕೊಂಡೇ ಅವರು ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ  ಮಾತುಕತೆ ನಡೆಸುತ್ತಿದ್ದರು. ಇದೀಗ ಯಡಿಯೂರಪ್ಪ ಅವರು ಕೂಡ ಇದೇ ಹಾದಿ ತುಳಿಯಲಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಮತ್ತಷ್ಟು ಸುದ್ದಿಗಳು

vertical

Latest News

ದೆಹಲಿ ಮಹಾ ನಗರ ಪಾಲಿಕೆ ಚುನಾವಣೆ: ಆಮ್ ಆದ್ಮಿ ಪಕ್ಷಕ್ಕೆ ಸ್ಪಷ್ಟ ಬಹುಮತ

newsics.com ನವದೆಹಲಿ:  ದೆಹಲಿ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದೆ. ಸ್ಪಷ್ಟ ಬಹುಮತ ಪಡೆದಿದೆ. 250  ವಾರ್ಡ್...

ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಸಿಪಿಐ, ಪತ್ನಿ ಸಾವು

newsics.com ಕಲಬುರ್ಗಿ: ರಾಜ್ಯದ ಕಲಬುರ್ಗಿ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಲಬುರ್ಗಿ ಜಿಲ್ಲೆಯ ನೆಲೋಗಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಿಪಿಐ  ರವಿ ಉಕ್ಕುಂದ ಮತ್ತು ಅವರ ಪತ್ನಿ  ಮಧು ಮತಿ ಮೃತಪಟ್ಟಿದ್ದಾರೆ ಎಂದು...

ದ್ವಿತೀಯ ಏಕದಿನ ಪಂದ್ಯ: ರೋಹಿತ್ ಶರ್ಮಾ ಬೆರಳಿಗೆ ಗಾಯ

newsics.com ಢಾಕಾ: ಬಾಂಗ್ಲಾದೇಶ ಎದುರಿನ ದ್ವಿತೀಯ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ  ನಾಯಕ ರೋಹಿತ್ ಶರ್ಮಾ ಅವರ ಬೆರಳಿಗೆ ಗಾಯವಾಗಿದೆ. ರೋಹಿತ್ ಶರ್ಮಾ ಅವರ ತೋರು ಬೆರಳಿಗೆ ಗಾಯವಾಗಿದ್ದು ಸ್ಕ್ಯಾನಿಂಗ್ ಮಾಡಲಾಗಿದೆ...
- Advertisement -
error: Content is protected !!