ಕಲಬುರ್ಗಿ: ಕಳೆದ ಮೂರು ದಿನಗಳ ಕಾಲ ನಡೆದ ನುಡಿ ಹಬ್ಬ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಬುರ್ಗಿಯಲ್ಲಿ ತೆರೆ ಬಿದ್ದಿದೆ. ಮೂರು ದಿನಗಳ ಕಾಲ ಅತ್ಯಂತ ಅಚ್ಚುಕಟ್ಟಾಗಿ ನಡೆದ ಸಾಹಿತ್ಯ ಸಮ್ಮೇಳನ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಈ ಸಮ್ಮೇಳನ ಕೇವಲ ಶಿಕ್ಷಿತರಿಗೆ ಮಾತ್ರ ಸೀಮಿತವಾಗಿರಲ್ಲಿಲ. ಶಾಲೆಯ ಮೆಟ್ಟಲು ಹತ್ತದ ಎಷ್ಟೋ ಮಂದಿ ಕೂಡ ಈ ಸಮ್ಮೇಳನ ಮನೆಯ ಹಬ್ಬ ಎಂಬಂತೆ ಸಂಭ್ರಮಿಸಿದ್ದರು. ಶುಚಿತ್ವ ಸೇರಿದಂತೆ ಅದೆಷ್ಟೊ ಕೆಲಸಗಳಲ್ಲಿ ಈ ಮಂದಿ ಈ ಕನ್ನಡ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 33 ವರ್ಷಗಳ ಬಳಿಕ ನಡೆದ ಸಮ್ಮಳನದ ನೆನಪಿನೊಂದಿಗೆ ಇದೀಗ ಮುಂದೆ ಸಮ್ಮೇಳನ ಯಾವಾಗ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಸಾಹಿತ್ಯ ಪ್ರೇಮಿಗಳು ಈ ಸಾಹಿತ್ಯ ಸಮ್ಮೇಳನಕ್ಕೆ ಭಾರವಾದ ಹೃದಯದಿಂದ ವಿದಾಯ ಹೇಳಿದ್ದಾರೆ.