newsics.com
ಮಂಡ್ಯ: ಸೆಲ್ಫಿ ತೆಗೆಯಲು ಹೋಗಿದ್ದ ಮಹಿಳೆಯೊಬ್ಬಳು ನದಿಗೆ ಬಿದ್ದ ಕಾರಣ, ಆಕೆಯನ್ನು ರಕ್ಷಿಸಲು ಹೋದ ಪತಿಯೂ ನದಿಗೆ ಹಾರಿದ್ದಾನೆ. ಇಬ್ಬರೂ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದುದನ್ನು ಗಮನಿಸಿದ ಮೀನುಗಾರರು ಅವರನ್ನು ರಕ್ಷಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಡ್ಯಾಮ್ ಬಳಿ ನಡೆದಿದೆ.
ಮೈಸೂರಿನ ಕೂರ್ಗಳ್ಳಿ ನಿವಾಸಿ ಆಶಾ ಎಂಬ ಮಹಿಳೆ ಕೆಆರ್ ಎಸ್ ನ ಕೆಳ ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆಯಲು ಮುಂದಾಗಿದ್ದು, ಈ ವೇಳೆ ಆಯ ತಪ್ಪಿ ನದಿಗೆ ಬಿದ್ದಿದ್ದಾರೆ.
ಪತ್ನಿಯನ್ನು ರಕ್ಷಿಸಲು ಪತಿ ಗಣೇಶ್ ಕೂಡ ನೀರಿಗೆ ಧುಮುಕಿದ್ದಾರೆ. ಪತಿ ಹಾಗು ಪತ್ನಿ ನದಿಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಂಡ ಸ್ಥಳೀಯ ಮೀನುಗಾರರು ಇಬ್ಬರನ್ನು ರಕ್ಷಿಸಿದ್ದಾರೆ.