ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಕಾಲದಲ್ಲಿ ಚಿಕಿತ್ಸೆ ಸಿಗದ ಪರಿಣಾಮ ಗರ್ಭಿಣಿಯೊಬ್ಬರು ಆಟೋದಲ್ಲಿ ದಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ. ಹಲವು ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿತ್ತು ಎಂಬ ಆರೋಪ ಕೂಡ ಕೇಳಿ ಬಂದಿದೆ. ಅಂತಿಮವಾಗಿ ಕೆ. ಸಿ ಜನರಲ್ ಆಸ್ಪತ್ರೆಗೆ ಬರುವಾಗ ಹೆರಿಗೆ ನೋವು ಬಂದು ಆಸ್ಪತ್ರೆ ಸಮೀಪದಲ್ಲಿ ಅಟೋದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ದುರದೃಷ್ಟವಶಾತ್ ಮಗು ಹೆತ್ತ ಕೂಡಲೇ ಮೃತಪಟ್ಟಿದೆ.
ಮಗುವಿಗೆ ಜನ್ಮ ನೀಡಿದ ಮಹಿಳೆ ಬೆಂಗಳೂರಿನ ಶ್ರೀರಾಮ ಪುರಂ ನಿವಾಸಿಯಾಗಿದ್ದಾರೆ ಎಂದು ಹೇಳಲಾಗಿದೆ. ಮಹಿಳೆಯ ಸಂಬಂಧಿಕರು ಆಸ್ಪತ್ರೆಗಳ ವಿರುದ್ಧ ಆರೋಪ ಹೊರಿಸುತ್ತಿದ್ದಾರೆ. ಆದರೆ ಇದರಲ್ಲಿ ಕೂಡ ಕೆಲವು ಗೊಂದಲಗಳು ಅಡಗಿವೆ. ಸಮಗ್ರ ತನಿಖೆಯ ಬಳಿಕವಷ್ಟೆ ಸತ್ಯ ಹೊರಬರಲಿದೆ