ಚಲಿಸುತ್ತಿದ್ದ ರೈಲಿನಿಂದ ನದಿಗೆ ಬಿದ್ದ ಯುವತಿ

NEWSICS.COM ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಿಂದ ಯುವತಿಯೊಬ್ಬಳು ನದಿಗೆ ಬಿದ್ದ ಘಟನೆ ಗುರುವಾರ (ನ.12) ತಡರಾತ್ರಿ ವರದಿಯಾಗಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಶತಾಬ್ದಿ ಎಕ್ಸಪ್ರೆಸ್ ಟ್ರೈನ್ ನಿಂದ ತುಂಗಭದ್ರಾ ನದಿಗೆ ಬಿದ್ದಿದ್ದಾಳೆ. ಯುವತಿಯನ್ನು ಸಹನಾ (24)ಎಂದು ಗುರುತಿಸಲಾಗಿದೆ. ಪಾಲಕರೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದೆ. ಯುವತಿಯ ತಂದೆ ರೈಲ್ವೆ ಪೋಲಿಸರಿಗೆ ಮಾಹಿತಿ ನೀಡಿದ್ದರಿಂದ ಅಗ್ನಿಶಾಮಕ ದಳದೊಂದಿಗೆ ಶೋಧ ಕಾರ್ಯ ನಡೆಸಿದ್ದಾರೆ. ಯುವತಿ ಆಯತಪ್ಪಿ ಬಿದ್ದಿದ್ದಾಳೊ ಅಥವಾ ಉದ್ದೇಶಪೂರಕವಾಗಿ ಹಾರಿದ್ದಾಳೊ ಎನ್ನುವುದು ಅಸ್ಪಷ್ಟವಾಗಿದೆ. ಪೊಲೀಸರು ತನಿಖೆಯ ನಂತರ ಸತ್ಯಾಂಶ ತಿಳಿಯಬೇಕಿದೆ. … Continue reading ಚಲಿಸುತ್ತಿದ್ದ ರೈಲಿನಿಂದ ನದಿಗೆ ಬಿದ್ದ ಯುವತಿ