newsics.com
ಬೆಂಗಳೂರು: ಹತ್ತನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಬನ್ನಂಜೆ ಗೋವಿಂದಾಚಾರ್ಯ ಶುಕನಾಸ ನ ಉಪದೇಶ ಪಾಠವೊಂದು ಸ್ತ್ರೀ ದ್ವೇಷ ಚಿಂತನೆಯನ್ನು ಮೂಡಿಸುತ್ತದೆ ಎಂದು ಮಹಿಳಾ ಸಂಘಟನೆಗಳು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿವೆ.
ಈ ಪಠ್ಯದಲ್ಲಿ ಹೆಣ್ಣನ್ನು ಸಂಪತ್ತು ಸಿರಿಗೆ ಹೋಲಿಕೆ ಮಾಡಲಾಗಿದ್ದು, ಕೀಳುಮಟ್ಟದ ಪದ ಪ್ರಯೋಗವಾಗಿದೆ ಎಂದು ಆಕ್ಷೇಪ ವ್ಯಕ್ತವಾಗಿದೆ.
ಇದರಲ್ಲಿ ಹೆಣ್ಣಿನ ಚಾರಿತ್ರ್ಯಹರಣ ಮಾಡಲಾಗಿದ್ದು ಆಕೆಯಿಂದ ಎಲ್ಲರೂ ಮೋಸಹೋಗುತ್ತಾರೆ. ಆಕೆ ಚಂಚಲೆ ಮತ್ತು ನಿರ್ವಂಚನೆಯಿಂದ ಯಾರನ್ನು ಪ್ರೀತಿಸಲಾರಳು ಎಂದು ಇದರಲ್ಲಿ ಉಲ್ಲೇಖವಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ಯಾವ ಭಾವನೆಯನ್ನು ಬಿತ್ತಲು ಪ್ರೇರೇಪಿಸುತ್ತದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.