Tuesday, April 13, 2021

ಕೊರೋನಾ ವಾರಿಯರ್ಸ್’ಗೆ ಯಮಹಾ ಸೂಪರ್ ಆಫರ್…!

ನವದೆಹಲಿ: ದೇಶದೆಲ್ಲೆಡೆ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಈ ಸೋಂಕಿನ ವಿರುದ್ಧ ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆಯರು, ಪೊಲೀಸರು ಹೀಗೆ ಸಾಕಷ್ಟು ಜನರು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಇಂಥ ಕೊರೋನಾ ವಾರಿಯರ್ಸ್’ಗೆ ಯಮಹಾ ಕಂಪನಿ ಸೂಪರ್ ಆಫರ್ ನೀಡಿದೆ.
ಕೊರೋನಾ ವಾರಿಯರ್ಸ್’ಗೆ ಇನ್ನಷ್ಟು ಬೆಂಬಲ ಹಾಗೂ ಉತ್ಸಾಹ ತುಂಬಲು ಮುಂದಾಗಿರುವ ವಾಹನ ತಯಾರಿಕಾ ಹಾಗೂ ಮಾರಾಟ ಕಂಪನಿ ಯಮಹಾ, ಹೊಸ ವಾಹನ ಖರೀದಿಸದವರಿಗೆ ಮೂರು ತಿಂಗಳ ಇಎಂಐ ಮೇಲೆ ವಿಶೇಷ ರಿಯಾಯತಿ ಘೋಷಿಸಿದೆ.
ಹೊಸ ವಾಹನ ಖರೀದಿಸಿದ ಗ್ರಾಹಕರು ಮೊದಲ ಮೂರು ತಿಂಗಳು ಅರ್ಧ ಕಂತು ಪಾವತಿಸಿದರೆ ಸಾಕು. ಮೂರು ತಿಂಗಳ ಬಳಿಕ ಪೂರ್ತಿ ಇಎಂಐ ಪಾವತಿಸಬೇಕು.
ದೇಶದ ಎಲ್ಲ ಯಮಹಾ ಡೀಲರ್ ಬಳಿ ಈ ಆಫರ್ ಇರುವುದಾಗಿ ಯಮಹಾ ಹೇಳಿಕೊಂಡಿದ್ದು, ಜುಲೈ 31ರವರೆಗೆ ಈ ರಿಯಾಯಿತಿ ಮುಂದುವರಿಯಲಿದೆ. ಕೊರೋನಾ ಹಿನ್ನೆಲೆಯಲ್ಲಿ ತಗ್ಗಿರುವ ವಹಿವಾಟು ಚುರುಕುಗೊಳಿಸಲು ಯಮಹಾ ಇಂತಹದೊಂದು ಪ್ರಯತ್ನಕ್ಕೆ ಮುಂದಾದಂತಿದೆ.

ಮತ್ತಷ್ಟು ಸುದ್ದಿಗಳು

Latest News

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...

ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ

newsics.com ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ  ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ. ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...
- Advertisement -
error: Content is protected !!