newsics.com
ಬೆಂಗಳೂರು/ಹಾಸನ: ಬೆಟ್ಟದಲ್ಲಿ ಮೈಮರೆತಿದ್ದ ಯುವಪ್ರೇಮಿಗಳ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಬ್ಲ್ಯಾಕ್’ಮೇಲ್ ಮಾಡಿದ್ದರಿಂದ ಭಯಗೊಂಡ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಚೆಸ್ಕಾಂನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಹಾಸನ ಜಿಲ್ಲೆ ಅರಸೀಕೆರೆಯ 32 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡವ.
ಯುವಕ ಅದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಅರಸೀಕೆರೆ ಸಮೀಪದ ಬೆಟ್ಟವೊಂದಕ್ಕೆ ಆಕೆಯ ಜತೆ ಹೋಗಿದ್ದ. ಯುವತಿಯೊಂದಿಗಿನ ಖಾಸಗಿ ಕ್ಷಣಗಳನ್ನು ಅದೇ ಊರಿನ ನಾಲ್ವರು ಬಾಲಕರು ಮೊಬೈಲ್ ನಲ್ಲಿ ದೃಶ್ಯ ಚಿತ್ರೀಕರಿಸಿಕೊಂಡಿದ್ದಾರೆ.
ಇದೇ ವಿಡಿಯೋ ಮೂಲಕ ಯುವಕನನ್ನು ಬೆದರಿಸಿ ಹಣ ವಸೂಲಿ ಮಾಡಿದ್ದಾರೆ. ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ ಯುವತಿಯ ಮೊಬೈಲ್ ನಂಬರ್ ಕೊಡುವಂತೆ ಬೆದರಿಸಿದ್ದಾರೆ. ಯುವತಿಯ ಮೊಬೈಲ್ ನಂಬರ್ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದಾರೆ. ಇದರಿಂದ ಆತಂಕಗೊಂಡ ಯುವಕ ಬೆಂಗಳೂರಿನ ಉಪ್ಪಾರಪೇಟೆಯ ಲಾಡ್ಜ್ ನಲ್ಲಿ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೀನಾದಲ್ಲಿ ಹೆಚ್ಚುತ್ತಿರುವ ಡೆಲ್ಟಾ ಹಾವಳಿ, ಜನರು ಮನೆ ಬಿಟ್ಟು ತೆರಳದಂತೆ ಲಾಕ್