newsics.com
ಬೆಂಗಳೂರು: ಸ್ಯಾಂಡಲ್’ವುಡ್’ನ ಯುವ ನಿರ್ದೇಶಕ ಭರತ್ ಅನಾರೋಗ್ಯ ಹಿನ್ನೆಲೆಯಲ್ಲಿ ಡಿ.24ರ ರಾತ್ರಿ 11 ಗಂಟೆಗೆ ನಿಧನರಾದರು.
ರೋರಿಂಗ್ ಸ್ಟಾರ್ ಶ್ರೀಮುರುಳಿ ನಟನೆಯ ಕಂಠಿ, ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ‘ಸಾಹೇಬ’ ಚಿತ್ರವನ್ನು ನಿರ್ದೇಶಿಸಿದ್ದ ಭರತ್ ಬಹುದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಕಳೆದೊಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟರು.
ವಿಜಯನಗರದ ಅತ್ತಿಗುಪ್ಪೆಯಲ್ಲಿ ನೆಲೆಸಿದ್ದ ಭರತ್ ಕೆಲವು ದಿನಗಳಿಂದ ಚಾಮರಾಜಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲೇ ಕೊರೋನಾ ಕಾಣಿಸಿಕೊಂಡಿದ್ದು ಗುರುವಾರ (ಡಿ.24) ರಾತ್ರಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಭರತ್ ಅವರಿಗೆ ಪತ್ನಿ, ಪುತ್ರಿ, ಸಹೋದರಿ ಹಾಗೂ ತಾಯಿ ಇದ್ದಾರೆ. ಭರತ್ ಅವರ ಅಂತ್ಯಸಂಸ್ಕಾರವನ್ನು ಕೆಂಗೇರಿಯ ಬಿಜೆಎಸ್ ಆಸ್ಪತ್ರೆಯ ಬಳಿ ಇರುವ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿತು.
ಕಬ್ಬನ್ ಪಾರ್ಕ್’ನಲ್ಲಿ ವಾಹನ ಸಂಚಾರ ನಿಷೇಧ ಕೋರಿ 5 ವರ್ಷದ ಮಗುವಿನಿಂದ ಹೈಕೋರ್ಟ್’ಗೆ ಪಿಐಎಲ್!
ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ: ಪುಷ್ಪ ನಮನ ಸಲ್ಲಿಸಿದ ಪ್ರಧಾನಿ
ರಾಜಮಂಡ್ರಿಯ ಶಿಕ್ಷಕಿಗೆ ಹೊಸ ಕೊರೋನಾ ಸೋಂಕು