ಕಾಬುಲ್: ಅಫ್ಘಾನಿಸ್ತಾನದ ಅರಿಯಾನ ಏರ್ಲೈನ್ಸ್ ವಿಮಾನ ಘಜನಿ ಪ್ರಾಂತ್ಯದಲ್ಲಿ ಪತನವಾಗಿರುವುದಾಗಿ ಆಫ್ಘಾನ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ವಿಮಾನದಲ್ಲಿ ಒಟ್ಟು 83 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದ್ದು, ಈವರೆಗೂ ಯಾವುದೇ ಸಾವು-ನೋವುಗಳು ಆಗಿರುವ ಬಗ್ಗೆ ವರದಿಯಾಗಿಲ್ಲ.
ಹೇರತ್ ನಿಂದ ಕಾಬೂಲ್ ಗೆ ಪ್ರಯಾಣ ಬೆಳೆಸುತ್ತಿದ್ದ ವಿಮಾನ ಏಕಾಏಕಿ ಗುಡ್ಡಗಾಡು ಪ್ರದೇಶಗಳಲ್ಲಿ ಪತನಗೊಂಡಿದೆ. ಬೋಯಿಂಗ್ ವಿಮಾನವು ಅರಿಯಾನ ಆಫ್ಘಾನ್ ಏರ್ಲೈನ್ಗೆ ಸೇರಿದ್ದಾಗಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 1:10ರ ಸುಮಾರಿಗೆ ಘಜನಿ ಪ್ರಾಂತ್ಯದ ದೇಹ್ ಏಕ್ ಜಿಲ್ಲೆಯ ಸಾಡೋ ಖೇಲ್ ಏರಿಯಾದಲ್ಲಿ ಪತನವಾಗಿದೆ ಎಂದು ಘಜನಿಯ ಪ್ರಾಂತೀಯ ಗವರ್ನರ್ ಕಚೇರಿಯ ವಕ್ತಾರ ಆರೀಫ್ ನೂರಿ ಹೇಳಿದ್ದಾರೆ.