ವಾಷಿಂಗ್ಟನ್: ಪ್ರತೀಕಾರದ ಮಾತನ್ನಾಡುತ್ತಿರುವ ಇರಾನ್ ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ವಿಶ್ವದ ಯಾವುದೇ ಮೂಲೆಯಲ್ಲಿ ಅಮೆರಿಕ ಮತ್ತು ಅಮೆರಿಕದ ಹಿತಾಸಕ್ತಿ ಮೇಲೆ ದಾಳಿ ನಡೆಸಿದರೆ ಸುಮ್ಮನಿರಲ್ಲ. ಇರಾನ್ ನ 52 ದಾಳಿ ಗುರಿಗಳನ್ನು ಅಮೆರಿಕ ಈಗಾಗಲೇ ಗುರುತಿಸಿದೆ. ಇದು ಇರಾನ್ ಗೆ ಸಂಬಂಧಿಸಿದ ಅತೀ ಮಹತ್ವದ ಸ್ಛಳಗಳಾಗಿವೆ ಎಂದು ಟ್ರಂಫ್ ಎಚ್ಚರಿಕೆ ನೀಡಿದ್ದಾರೆ. 1979ರಲ್ಲಿ ಇರಾನ್ ಅಮೆರಿಕದ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿ 52 ಮಂದಿಯನ್ನು ಒತ್ತೆಯಾಳಾಗಿ ಇರಿಸಿತ್ತು. ಇದರ ನೆನಪಿಗಾಗಿ ಅಮೆರಿಕ 52 ದಾಳಿ ಗುರಿ ಸಿದ್ದಪಡಿಸಿದೆ ಎಂದು ಟ್ರಂಫ್ ಸ್ಪಷ್ಟಪಡಿಸಿದ್ದಾರೆ.