Thursday, June 17, 2021

ಈರುಳ್ಳಿ ಇನ್ನಷ್ಟು ದುಬಾರಿ ಸಾಧ್ಯತೆ

* ಜನವರಿ 20ಕ್ಕೆ ಈರುಳ್ಳಿ ಆಮದು ನವದೆಹಲಿ: ವಿದೇಶಿ ಈರುಳ್ಳಿ ದೇಶಕ್ಕೆ ಆಮದಾಗುವವರೆಗೂ ಈರುಳ್ಖಿ ಬೆಲೆ ಇಳಿಯುವ ಸಾಧ್ಯತೆಯಿಲ್ಲ. ಈರುಳ್ಳಿ ಇನ್ನಷ್ಟು ದುಬಾರಿಯಾಗಲಿದೆ.ಜನವರಿ 20ರ ಹೊತ್ತಿಗೆ ಈರುಳ್ಳಿ ಆಮದಾಗಲಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಹೀಗಾಗಿ ಅಲ್ಲಿವರೆಗೂ ಈರುಳ್ಳಿ ಬೆಲೆ ಇಳಿಯುವುದು ಅಸಾಧ್ಯ ಎಂದೂ ಕೇಂದ್ರ ಹೇಳಿದೆ.ಈರುಳ್ಳಿ ಬೆಲೆ ತಡೆಯಲು ಸರ್ಕಾರ 21,000 ಟನ್‌ ಆಮದು ಮಾಡಲು ನಿರ್ಧರಿಸಿದೆ. ಇದರ ಜತೆಗೆ ಈಗಾಗಲೇ ಈರುಳ್ಳಿ ರಫ್ತನ್ನು ನಿಷೇಧಿಸಲಾಗಿದೆ ಎಂದು ರಾಜ್ಯಸಭೆಯಲ್ಲಿ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ಸಚಿವ ದಾನ್ವೆ ರಾವ್‌ ಸಾಹೇಬ್‌ ದಾದಾರಾವ್‌ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಹೆಚ್ಚಿದ ಸಾಗಣೆ, ಉತ್ಪಾದನಾ ವೆಚ್ಚ: ಟಿವಿ ಬೆಲೆ ಹೆಚ್ಚಳ ಸಾಧ್ಯತೆ

newsics.com ಬೆಂಗಳೂರು: ಸಾಗಣೆ ಹಾಗೂ ಉತ್ಪಾದನಾ ವೆಚ್ಚ ಏರಿಕೆ ಹಿನ್ನೆಲೆಯಲ್ಲಿ ಎಲ್ಇಡಿ ಟಿವಿಗಳ ಬೆಲೆಯಲ್ಲೆ ಶೇ.3ರಿಂದ 4ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಪ್ಯಾನಾಸೋನಿಕ್, ಹೈಯರ್‌ ಹಾಗೂ ಥಾಮ್ಸನ್ ಬ್ರಾಂಡ್‌ಗಳು ತಮ್ಮ...

ಹೊಸನಗರ ತಾಲೂಕಲ್ಲಿ ದಾಖಲೆಯ ಮಳೆ, ಜೋಗ ಜಲಪಾತಕ್ಕೆ ಜೀವಕಳೆ

ಶಿವಮೊಗ್ಗ: ಲಿಂಗನಮಕ್ಕಿ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಮಳೆಯಾಗಿದ್ದು, ದಾಖಲೆಯ 33 ಸೆಂಟಿ ಮೀಟರ್ ಮಳೆ ಸುರಿದಿದೆ. ಹೊಸನಗರ ತಾಲೂಕಿನಾದ್ಯಂತ ಬುಧವಾರ ಒಂದೇ ದಿನ ಸುರಿದಂತೆ ಮಳೆ, ರಾಜ್ಯದಲ್ಲೇ ಅತ್ಯಧಿಕ ದಾಖಲೆಯ...

ಗಾಜಿಯಾಬಾದ್ ಹಲ್ಲೆ ಪ್ರಕರಣ: ನಟಿ‌ ಸ್ವರಾ, ಟ್ವಿಟರ್ ಎಂಡಿ‌ ವಿರುದ್ಧ ದೂರು

newsics.com ನವದೆಹಲಿ: ಗಾಜಿಯಾಬಾದ್‌ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸ್ವರಾ ಭಾಸ್ಕರ್, ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಮತ್ತಿತರರ ವಿರುದ್ಧ ದೂರು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ...
- Advertisement -
error: Content is protected !!