ಗುವಾಹತಿ: ಒಂದೇ ಗಂಟೆಯ ಅವಧಿಯಲ್ಲಿ ಅಸ್ಸಾಂನ 5 ಕಡೆ ಭಾನುವಾರ ಸ್ಫೋಟ ಸಂಭವಿಸಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಗಣರಾಜ್ಯೋತ್ಸವ ದಿನದಂದು ಡಿಬ್ರುಗರ್ನಲ್ಲಿ 2 ಐಇಡಿ, ಸೋನಾರಿ, ದುಲಿಯಾಜನ್ ಮತ್ತು ದೂಮ್ಡೋಮದಲ್ಲಿ ತಲಾ ಒಂದು ಗ್ರೆನೇಡ್ ಸ್ಫೋಟಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್ (ಸ್ವತಂತ್ರ) ಸಂಘಟನೆ ಸ್ಫೋಟ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ
ಒಂದೇ ಗಂಟೆಯಲ್ಲಿ ಅಸ್ಸಾಂನ 5 ಕಡೆ ಸ್ಫೋಟ
Follow Us