ಕಲಬುರಗಿ: ಅಖಿಲ ಭಾರತ 85ನೇ ಸಾಹಿತ್ಯ ಸಮ್ಮೇಳನದ ಅಂತಿಮ ದಿನವಾದ ಶುಕ್ರವಾರ 6 ನಿರ್ಣಯ ಕೈಗೊಳ್ಳಲಾಗಿದೆ.
ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು, ಸಂವಿಧಾನದ 371 ಜೆ ಕಲಂನ ಲೋಪದೋಷವನ್ನು ಶೀಘ್ರ ನಿವಾರಿಸಿ, ಅದರ ಸಮರ್ಪಕ ಅನುಷ್ಠಾನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಸಮ್ಮೇಳನಆಗ್ರಹಿಸಿದೆ.
ನಂಜುಂಡಪ್ಪ ವರದಿ ಜಾರಿ ಮಾಡಿ ತಾರತಮ್ಯ ನಿವಾರಿಸಬೇಕು, ಕಲ್ಯಾಣ ಕರ್ನಾಟಕದ ಸ್ಮಾರಕಗಳನ್ನು ಕಾಲಮಿತಿಯಲ್ಲಿ ಅಭಿವೃದ್ಧಿಪಡಿಸಬೇಕು, ಆಂಧ್ರ ಮಾತ್ರವಲ್ಲದೆ ಗಡಿ ಪ್ರದೇಶಗಳಲ್ಲಿ ಕನ್ನಡ ಶಾಲೆಗಳನ್ನು ಮುಚ್ಚದಂತೆ ಸರ್ಕಾರ ನಿಗಾ ವಹಿಸಬೇಕು, ಗಡಿ ವಿಚಾರದಲ್ಲಿ ಕೆಣಕುತ್ತಿರುವ ಮಹಾರಾಷ್ಟ್ರದ ಉದ್ಧಟತನವನ್ನು ಹತ್ತಿಕ್ಕಿ, ಮಹಾಜನ ವರದಿ ಅನುಷ್ಠಾನ ಮಾಡಿ ವಿವಾದ ಅಂತ್ಯಗೊಳಿಸಬೇಕು ಎಂದು ಸಾಹಿತ್ಯ ಸಮ್ಮೇಳನ ಒತ್ತಾಯಿಸಿದೆ.
ಸಮ್ಮೇಳನ ಯಶಸ್ಸಿಗೆ ಕಾರಣರಾದ ಸ್ವಾಗತ ಸಮಿತಿ, ವಿವಿಧ ಸಮಿತಿ, ಜಿಲ್ಲಾಡಳಿತ, ಕಾರ್ಯಕರ್ತರಿಗೆ, ಆತಿಥ್ಯ ತೋರಿದ ಜನರಿಗೆ ಕೃತಜ್ಞತೆ ಸಲ್ಲಿಸುವ ನಿರ್ಣಯವನ್ನೂ ಸಮ್ಮೇಳನ ಕೈಗೊಂಡಿದೆ.
ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಸಾಹಿತ್ಯ ಸಮ್ಮೇಳನ ಆಗ್ರಹ
Follow Us