ಟೆಹರಾನ್: ಬುಧವಾರ ಮುಂಜಾನೆ ಇರಾಕ್ ನಲ್ಲಿರುವ ಅಮೆರಿಕದ ಎರಡು ವಾಯು ನೆಲೆಗಳ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 80 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಸುದ್ದಿ ಸಂಸ್ಥೆ ಹೇಳಿದೆ. ಆದರೆ ಇರಾನ್ ಅಧಿಕೃತವಾಗಿ ಸಾವು ನೋವಿನ ಬಗ್ಗೆ ಇದುವರೆಗೆ ಪ್ರಸ್ತಾಪಿಸಿಲ್ಲ. ಆದರೆ, ಇರಾನ್ ನ ಹೇಳಿಕೆಯನ್ನು ಅಮೆರಿಕ ಸಾರಸಗಟಾಗಿ ತಳ್ಳಿಹಾಕಿದೆ. ಕ್ಷಿಪಣಿ ದಾಳಿ ನಡೆಸಲಾಗಿದೆ. ಇದು ಸತ್ಯ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.