Saturday, October 16, 2021

ಗುಜರಾತ್ ಹಿಂಸಾಚಾರ: ಮೋದಿಗೆ ಕ್ಲೀನ್ ಚಿಟ್ ನೀಡಿದ ನಾನಾವತಿ ಆಯೋಗ

Follow Us

ಅಹ್ಮದಾಬಾದ್: ಗೋಧ್ರಾ ಘಟನೆಯ ಬಳಿಕ ಗುಜರಾತ್ ನಲ್ಲಿ ಸಂಭವಿಸಿದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಗೆ ತನಿಖಾ ಆಯೋಗ  ಕ್ಲೀನ್ ಚಿಟ್ ನೀಡಿದೆ. ಈ ಕುರಿತಂತೆ ತನಿಖೆ ನಡೆಸಿದ ನಾನಾವತಿ ಆಯೋಗದ ವರದಿಯನ್ನು ಗುಜರಾತ್ ವಿಧಾನಸಭೆಯಲ್ಲಿ ಮಂಡಿಸಲಾಯಿತು.  ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪರಿಣಾಮ 40ಕ್ಕೂ ಹೆಚ್ಚು ಮಂದಿ  ಸಜೀವ ದಹನವಾಗಿದ್ದರು. 2002ರಲ್ಲಿ ಈ ಘಟನೆ ನಡೆದಿತ್ತು. ಇದು ಗುಜರಾತ್ ನಲ್ಲಿ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿತ್ತು. 50ಕ್ಕೂ ಹೆಚ್ಚು ಮಂದಿ ಗಲಭೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಕೋಟ್ಯಂತರ ರೂಪಾಯಿ ಮೌಲ್ಯದ  ವಸ್ತುಗಳು ಸುಟ್ಟು ಭಸ್ಮವಾಗಿತ್ತು. ಗಲಭೆ ತಡೆಗಟ್ಟಲು ಅಂದು ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿತ್ತು.

ಮತ್ತಷ್ಟು ಸುದ್ದಿಗಳು

Latest News

ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಇಬ್ಬರು‌ ನಾಗರಿಕರು ಸಾವು

newsics.com ಜಮ್ಮು ಮತ್ತು ಕಾಶ್ಮೀರ: ಉಗ್ರರ ದಾಳಿಗೆ ಇಬ್ಬರು‌ ನಾಗರಿಕರು ಮೃತಪಟ್ಟಿದ್ದಾರೆ. ಬಿಹಾರ ಮೂಲದ ಬೀದಿ ಬದಿ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಕಾರ್ಮಿಕ‌ ಇಂದು ಜಮ್ಮು...

3 ದಿನ ಉಚಿತ ಪೆಟ್ರೋಲ್ ನೀಡಿದ ಬಂಕ್ ಮಾಲೀಕ

newsics.com ಮಧ್ಯ ಪ್ರದೇಶ: ಇಲ್ಲಿನ ಬೆತುಲ್ ಜಿಲ್ಲೆಯಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ತನ್ನ ಗ್ರಾಹಕರಿಗೆ 3 ದಿನ ಉಚಿತ ಪೆಟ್ರೋಲ್ ನೀಡಿದ್ದಾರೆ. ದೀಪಲ್ ಸೈನಾನಿ ಎಂಬುವವರು ಹೆಣ್ಣು ಮಗು ಹುಟ್ಟಿದ ಸಂಭ್ರಮದಲ್ಲಿ ಉಚಿತ ಪೆಟ್ರೋಲ್ ನೀಡಿದ್ದಾರೆ....

ರಾಜ್ಯದಲ್ಲಿ ಹೊಸದಾಗಿ 264 ಕೊರೋನಾ ಪ್ರಕರಣ ಪತ್ತೆ, 421 ಮಂದಿ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 264 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,83,133ಕ್ಕೆ ಏರಿಕೆಯಾಗಿದೆ. 421 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 29,35,659 ಜನ ಚೇತರಿಸಿಕೊಂಡಿದ್ದಾರೆ. 6 ಸೋಂಕಿತರು...
- Advertisement -
error: Content is protected !!